Wednesday, July 3, 2024
Homeಕರಾವಳಿಮಂಗಳೂರುಬಂಟ್ವಾಳ; ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಉಚಿತ ಪುಸ್ತಕ ವಿತರಣಾ ಮತ್ತು ಸನ್ಮಾನ ಸಮಾರಂಭ

ಬಂಟ್ವಾಳ; ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಉಚಿತ ಪುಸ್ತಕ ವಿತರಣಾ ಮತ್ತು ಸನ್ಮಾನ ಸಮಾರಂಭ

spot_img
- Advertisement -
- Advertisement -

ಬಂಟ್ವಾಳ; ಸ್ವಾಮಿ ವಿವೇಕಾನಂದರ ತತ್ವದರ್ಶನಗಳನ್ನು ಹೊಂದಿಟ್ಟುಕೊಂಡು ಸಂಘದ ಪ್ರೇರಣೆಯ ಜೊತೆಗೆ ಸಮಾನ ಮನಸ್ಕ ಯುವಕರ ತಂಡ ಒಂದು ಇಂದು ಮಾಡುತ್ತಿರುವ ನಮಗೆಲ್ಲರಿಗೂ ಮಾದರಿ ಎಂದು ಸಾಮಾಜಿಕ ಕಾರ್ಯಕರ್ತರು ಮಾತೃಭೂಮಿಯ ವೇದಿಕೆಯ ಮಾರ್ಗದರ್ಶಕರು ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು.

ಅವರು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂರುವ ಇಲ್ಲಿ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಇವರು ಆಯೋಜಿಸಿರುವ ಉಚಿತ ಪುಸ್ತಕ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಇಂದಿನ ದಿನಮಾನಗಳಲ್ಲಿ ಸರಕಾರದ ಕೆಲವೊಂದು ಯೋಜನೆಗಳು ಮಕ್ಕಳಿಗೆ ಸರಿಯಾಗಿ ಪೂರೈಕೆಯಾಗದೆ ಇದ್ದರೂ ಇಂತಹ ಯುವ ಸಮಾಜ ಮಾಡುತ್ತಿರುವಂತಹ ಕೆಲಸ ಕಾರ್ಯಗಳು ಸಾಧನೆವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಮ್ಮ ಕುಡ್ಲ ವಾಹಿನಿಯ ನಿರೂಪಕರು ಮತ್ತು ವಾರ್ತಾ ವಾಚಕರು ಆಗಿರುವ ಡಾ ಪ್ರಿಯ ಹರೀಶ್ ಅವರು ಮಕ್ಕಳನ್ನು ಹುರಿದುಂಬಿಸುವುದರ ಜೊತೆಗೆ ಮಕ್ಕಳು ಜೀವನದಲ್ಲಿ ಪರಿಶ್ರಮದ ಮುಖಾಂತರ ಗೆಲ್ಲಬೇಕು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ರಂಜಿತ್ ಕುಮಾರ್ ಮಜೂರು ಮಕ್ಕಳು ಸಂಸ್ಕಾರಯುತ ಗುಣಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ತರವಾದುದು ಎಂದರು.

ಈ ಸಂದರ್ಭದಲ್ಲಿ ಇಲ್ಲಿನ ಎಸ್ ಎಸ್ ಎಲ್ ಸಿ ಯಲ್ಲಿ ಮಹತ್ತರ ಸಾಧನೆಗೈದ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿನ ವಿದ್ಯಾರ್ಥಿಗಳಾದ ಕು ದೀಕ್ಷಿತ ಕು ಕೀರ್ತನ ಎಸ್ ಕುಲಾಲ್ ಹಾಗೂ ಮನೀಶ್ ಕುಮಾರ್ ಇವರನ್ನು ‌ಸಂನ್ಮಾನಿಸಲಾಯಿತು. ಕು. ಸಮೀಕ್ಷಾ ಇವರು ವೈಯಕ್ತಿಕ ಗೀತೆಯನ್ನು ಹಾಡಿದರು. ರವಿ ಮಾಣಿಲ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತೃಭೂಮಿ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೊಂಕೋಡು ಇವರು ಸ್ವಾಗತಿಸಿ ಸಂಚಾಲಕರಾದ ಸುದೇಶ್ ಮಾಣಿಲ ವಂದಿಸಿದರು. ಕು. ತೀರ್ಥನಾ, ಕು. ಸ್ಮಿತಾ, ಕು. ಲಾವಣ್ಯ ಪ್ರಾರ್ಥಿಸಿ, ಉಪನ್ಯಾಸಕರಾದ ಶ್ರೀಮತಿ ಜಯಲಕ್ಷ್ಮಿ ಇವರು ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!