Thursday, June 25, 2026
Homeತಾಜಾ ಸುದ್ದಿಬಾಲಿವುಡ್ ನಟಿ ಐಶ್ವರ್ಯ ರೈ ಕಾರಿಗೆ ಬಸ್‌ ಢಿಕ್ಕಿ – ಅಪಘಾತದಿಂದ ಪಾರಾದ ನಟಿ 

ಬಾಲಿವುಡ್ ನಟಿ ಐಶ್ವರ್ಯ ರೈ ಕಾರಿಗೆ ಬಸ್‌ ಢಿಕ್ಕಿ – ಅಪಘಾತದಿಂದ ಪಾರಾದ ನಟಿ 

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ  ಜುಹು ಉಪನಗರದಲ್ಲಿ ಬಸ್ ಢಿಕ್ಕಿ ಹೊಡೆದಿದ್ದು, ನಟಿ ಅದೃಷ್ಟವಶಾತ್‌ ಘಟನೆಯಿಂದ ಯಾವುದೇ ರೀತಿಯ ಅಪಾಯವಾಗದೆ ಪಾರಾಗಿದ್ದಾರೆ.

ಕಾರಿನಲ್ಲಿದ್ದಂತಹ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕಾರು ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್‌ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ನಂತರದಲ್ಲಿ ಬೌನ್ಸರ್‌ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!