Monday, June 8, 2026
Homeಕರಾವಳಿಸುಳ್ಯ: ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಬೊಲೆರೋ: ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಗಾಯ

ಸುಳ್ಯ: ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಬೊಲೆರೋ: ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಗಾಯ

- Advertisement -
- Advertisement -

ಸುಳ್ಯ: ವೇಗವಾಗಿ ಬಂದ ಬೊಲೆರೋವೊಂದು ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿಯಲ್ಲಿ‌ ಕೆಲಸ ಮಾಡುತ್ತಿದ್ದ ಯುವಕ ಅನ್ನದ ಪಾತ್ರೆ ಮೇಲೆ ಬಿದ್ದು ಗಾಯಗೊಂಡಿರುವ ಘಟನೆ ಸುಳ್ಯದ ಕುರುಂಜಿಭಾಗ್ ನ ಆಯರ್ವೇದಿಕ್ ಆಸ್ಪತ್ರೆಯಲ್ಲಿ ಬಳಿ ನಡೆದಿದೆ.

ಪ್ರಸಾದ್ ಗಾಯಗೊಂಡ ಯುವಕ. ಪ್ರಸಾದ್ ಹಾಗೂ ಗ್ರಾಹಕರೊಬ್ಬರು ಅಂಗಡಿಯಲ್ಲಿದ್ದ ವೇಳೆ‌ ಏಕಾಏಕಿ ಅಂಗಡಿಗೆ ಬೊಲೆರೋ ನುಗ್ಗಿದೆ. ಈ‌ ವೇಳೆ‌ ಅನ್ನವನ್ನು ಪ್ರಸಾದ್ ಮಡಿಕೆಯಲ್ಲಿ‌ ಬೇಯಿಸುತ್ತಿದ್ದರು. ಬೊಲೊರೋ ನುಗ್ಗಿದ ರಭಸಕ್ಕೆ ಅನ್ನದ ಪಾತ್ರೆ ಆಯತಪ್ಪಿ ಪ್ರಸಾದ್ ಮೇಲೆ ಬಿದ್ದು ಅವರು‌ ಗಂಭೀರ ಗಾಯಗೊಂಡಿದ್ದಾರೆ. ಬೊಲೆರೋ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಆತನ ವಿರುದ್ಧ ಪ್ರಕರಣ‌ ದಾಖಲಾಗಿದೆ.

- Advertisement -

Latest News

error: Content is protected !!