Friday, May 17, 2024
Homeಪ್ರಮುಖ-ಸುದ್ದಿತಮಿಳುನಾಡಿನ ಕಲ್ಲಿದ್ದಲು ಕಂಪನಿಯ ಬಾಯ್ಲರ್ ಸ್ಪೋಟ : ಏಳು ಜನರಿಗೆ ಗಾಯ

ತಮಿಳುನಾಡಿನ ಕಲ್ಲಿದ್ದಲು ಕಂಪನಿಯ ಬಾಯ್ಲರ್ ಸ್ಪೋಟ : ಏಳು ಜನರಿಗೆ ಗಾಯ

spot_img
- Advertisement -
- Advertisement -

ಚೆನ್ನೈ : ತಮಿಳುನಾಡಿನ ಕಡಲೂರಿನಲ್ಲಿ ಸಾರ್ವಜನಿಕ ವಲಯದ ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದಾಗಿ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ನೈವೆಲಿ ಲಿಗ್ನೈಟ್ ಕಾರ್ಪೊರೇಶನ್‌ನ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಆರಂಭಿಕ ವರದಿಗಳ ಪ್ರಕಾರ, ಬಾಯ್ಲರ್ ಸ್ಫೋಟದಲ್ಲಿ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ನೇವೆಲಿ ಲಿಗ್ನೈಟ್ ಕಾರ್ಪೊರೇಷನ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತಮಿಳುನಾಡು ಪೊಲೀಸ್ ತಂಡಗಳು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲೇ ಇದ್ದು ಕಾರ್ಯಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಕರೋನವೈರಸ್ ಏಕಾಏಕಿ ಮಧ್ಯೆ ಭಾರತವು ಇತರ ಎರಡು ಕಡೆ ವಿಷಾನಿಲ ಸೋರಿಕೆಯಾದ, ನಂತರ ಈ ಘಟನೆಯೂ ವರದಿಯಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಾಗಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು.

- Advertisement -
spot_img

Latest News

error: Content is protected !!