- Advertisement -
- Advertisement -
ಮಂಗಳೂರು: ಹೆದ್ದಾರಿ ಮಧ್ಯೆ ಹೊತ್ತಿ ಬಿಎಂಡಬ್ಲ್ಯು ಕಾರು ಹೊತ್ತಿ ಉರಿದ ಘಟನೆ ಮಂಗಳೂರು ನಗರದ ಅಡ್ಯಾರ್ ನಲ್ಲಿ ನಡೆದಿದೆ.
ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಬಿಸಿ ರೋಡ್ ಕಡೆಯಿಂದ ಚಾಲಕ ಗುರುದೀಪ್ ಎಂಬವರು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ಸಹ್ಯಾದ್ರಿ ಕಾಲೇಜು ಮುಂಭಾಗಕ್ಕೆ ತಲುಪುತ್ತಿದ್ದಂತೆ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಕಾರಿನಲ್ಲಿ ಒಬ್ಬರೇ ಇದ್ದರು. ಕೂಡಲೇ ಕಾರಿನಿಂದ ಇಳಿದಿದ್ದಾರೆ. ಅನಂತರ, ಎಲ್ಲರೂ ನೋಡುತ್ತಿರುವಾಗಲೇ ನಡುರಸ್ತೆಯಲ್ಲೇ ಧಗ ಧಗನೆ ಕಾರು ಹೊತ್ತಿ ಉರಿದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಏನೋ ಸಮಸ್ಯೆ ಇದೆಯೆಂದು ಅಡ್ಯಾರಿನ ಬಿಎಂಡಬ್ಲ್ಯು ಗ್ಯಾರೇಜ್ ಗೆ ತರುತ್ತಿದ್ದರು. ಅಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಭಸ್ಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -