Thursday, June 4, 2026
Homeಕರಾವಳಿಮಂಗಳೂರು: ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರು ಇಡಲು ಬಿಜೆಪಿ ಸದಸ್ಯರಿಂದ ಪ್ರಸ್ತಾಪ; ಪಾಲಿಕೆ ಸಾಮಾನ್ಯ ಸಭೆ...

ಮಂಗಳೂರು: ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರು ಇಡಲು ಬಿಜೆಪಿ ಸದಸ್ಯರಿಂದ ಪ್ರಸ್ತಾಪ; ಪಾಲಿಕೆ ಸಾಮಾನ್ಯ ಸಭೆ ಕೆಲಕಾಲ ಮುಂದೂಡಿಕೆ

- Advertisement -
- Advertisement -

ಮಂಗಳೂರು: ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ‌ ಕಾಲ‌ ಸಭೆ ಮುಂದೂಡಿಕೆಯಾಯಿತು.

ಶನಿವಾರ ನಡೆದ ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್‌ ಜಂಕ್ಷನ್‌ ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.

ಕಳೆದ‌‌ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಅಜೆಂಡಾದಲ್ಲಿ ಬಿಜೆಪಿ ಚರ್ಚೆಗೆ ಅವಕಾಶ ನೀಡಲಿಲ್ಲ. ಅದನ್ನು ಸ್ಥಿರೀಕರಣಗೊಳಿಸದೆ ನಮ್ಮ‌ಆಕ್ಷೇಪಣೆ ದಾಖಲು ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯರು ಒತ್ತಾಯ ಮಾಡಿದರು.

- Advertisement -

Latest News

error: Content is protected !!