Thursday, June 4, 2026
Homeಕರಾವಳಿಬಿಜೆಪಿ ಪ್ರೈವೇಟ್ ಲಿಮಿಟೆಡ್ ಪಾರ್ಟ್ ನರ್ ಶಿಪ್ ಕಂಪನಿ ಅಲ್ಲ; ಬೈಂದೂರಿನಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ

ಬಿಜೆಪಿ ಪ್ರೈವೇಟ್ ಲಿಮಿಟೆಡ್ ಪಾರ್ಟ್ ನರ್ ಶಿಪ್ ಕಂಪನಿ ಅಲ್ಲ; ಬೈಂದೂರಿನಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ

- Advertisement -
- Advertisement -

ಉಡುಪಿ: ಬಿಜೆಪಿ ಪ್ರೈವೇಟ್ ಲಿಮಿಟೆಡ್ ಪಾರ್ಟ್ ನರ್ ಶಿಪ್ ಕಂಪನಿ ಅಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ,
ನನಗೆ ಆರ್ ಎಸ್ಎಸ್ ಮತ್ತು ಸಂಘ ಪರಿವಾರ ಶಿವಮೊಗ್ಗ ದಲ್ಲಿ ಬೆಂಬಲಿಸಿವೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನ ಬೆಂಬಲ ಸಿಕ್ಕಿದೆ ಎಂದು ಹೇಳಿರುವ ಈಶ್ವರಪ್ಪ, ವಿಜಯೇಂದ್ರ ಎಳಸು ಅವನಿಗೆ ಅನುಭವ ಇಲ್ಲ, ತಪಸ್ಸಿನಿಂದ ಕಟ್ಟಿದ ಪಕ್ಷ ಅಧೋಗತಿಗೆ ಹೋಗುತ್ತಿದೆ ಎಂದಿದ್ದಾರೆ.

ಅಲ್ಲದೇ, ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಎಂದೂ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ನಾನ್ಯಾರು ಅಂತಾ ಗೊತ್ತಿಲ್ಲ ಎನ್ನುವ ರಾಧಾ ಮೋಹನ್ ದಾಸ್ ಅಗರ್ ವಾಲ್ ಮನೆಗೆ ಬಂದಿದ್ದರು ಎಂದು ಹೇಳಿದ ಕೆ.ಎಸ್. ಈಶ್ವರಪ್ಪ, ನನ್ನ ಕೂಗು ಕೇಂದ್ರಕ್ಕೆ ತಲುಪಿದ್ದು ಇವತ್ತು ಕೂಡಾ ಫೋನ್ ಬಂದಿದೆ ಎಂದಿದ್ದಾರೆ.

- Advertisement -

Latest News

error: Content is protected !!