Friday, June 5, 2026
Homeಕರಾವಳಿವಿಟ್ಲ: ಬೈಕ್‌ಗಳ‌ ನಡುವೆ ಅಪಘಾತ ವ್ಯಕ್ತಿ ಸಾವು

ವಿಟ್ಲ: ಬೈಕ್‌ಗಳ‌ ನಡುವೆ ಅಪಘಾತ ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ.

ಮಂಕುಡೆ ಅಮೈ ನಿವಾಸಿ ಸಂಜೀವ ಶೇಖ ಅವರ ಪುತ್ರ ಚಂದ್ರಹಾಸ ಶೇಖ (50) ಮೃತ ದುರ್ದೈವಿ.

ಅಪಘಾತವಾಗುತ್ತಿದ್ದಂತೆ ಚಂದ್ರಹಾಸ ಶೇಖ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!