Thursday, June 4, 2026
Homeಕರಾವಳಿಬಂಟ್ವಾಳ; ಎರಡು ವರ್ಷಗಳ ಹಿಂದೆ ಪತಿಯನ್ನು ಕೊಂದು ಜೈಲು ಸೇರಿದ್ದ ಮಹಿಳೆ ಅಪಘಾತಕ್ಕೆ ಬಲಿ

ಬಂಟ್ವಾಳ; ಎರಡು ವರ್ಷಗಳ ಹಿಂದೆ ಪತಿಯನ್ನು ಕೊಂದು ಜೈಲು ಸೇರಿದ್ದ ಮಹಿಳೆ ಅಪಘಾತಕ್ಕೆ ಬಲಿ

- Advertisement -
- Advertisement -

ಬಂಟ್ವಾಳ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಪೆರ್ಲ ಚರ್ಚ್ ಬಳಿ ಭಾನುವಾರ ಸಂಜೆ ವೇಳೆ ನಡೆದಿದೆ.ನಾವೂರ ನಿವಾಸಿ ಉಮಾವತಿ ಮೃತಪಟ್ಟ ಮಹಿಳೆ.

ಉಮಾವತಿ ಅವರು ಪೆರ್ಲ ಅಂಗಡಿಯೊಂದಕ್ಕೆ ಹೋಗಿದ್ದು, ವಾಪಾಸು ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ  ಉಮಾವತಿ ಸ್ಥಳ ದಲ್ಲಿಯೇ ಸಾವನಪ್ಪಿದ್ದಾರೆ. ಉಮಾವತಿ ಅವರು ಎರಡು ವರ್ಷಗಳ ಹಿಂದೆ ಗಂಡನನ್ನು ಕೊಂದು ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಗೆ ಬಂದಿದ್ದರು.

- Advertisement -

Latest News

error: Content is protected !!