Thursday, June 4, 2026
Homeಕರಾವಳಿಉಳ್ಳಾಲ : ಬೈಕ್ ಪಲ್ಟಿಯಾಗಿ ಮಹಿಳೆ ಸಾವು!

ಉಳ್ಳಾಲ : ಬೈಕ್ ಪಲ್ಟಿಯಾಗಿ ಮಹಿಳೆ ಸಾವು!

- Advertisement -
- Advertisement -

ಉಳ್ಳಾಲ :ಉಳ್ಳಾಲ ಠಾಣೆ ವ್ಯಾಪ್ತಿಯ ಕೆಸಿ ರೋಡ್ ಸಮೀಪದ ಪಂಜಳ ಬಳಿ ಬೈಕ್ ‌ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಮಂಜೇಶ್ವರ ತುಮಿನಾಡು ನಿವಾಸಿ ಜಮೀಳ (40) ಮೃತಪಟ್ಟವರು. ಅವರು ಕೆಸಿರೋಡ್ ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ರಾತ್ರಿ ವೇಳೆ ಮನೆಗೆ ವಾಪಸ್ ಹೋಗುವ ಸಂದರ್ಭ ಬೈಕ್ ಪಲ್ಟಿಯಾಗಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!