Friday, April 26, 2024
Homeತಾಜಾ ಸುದ್ದಿಸೆಲ್ಫೀ ನೆಪದಲ್ಲಿ ಬಿಗ್ ಬಾಸ್ ಸ್ಪರ್ದಿಗೆ ಮುತ್ತಿಟ್ಟ ಅಭಿಮಾನಿ.. ಮರುದಿನವೇ ಬಂತು ಆಕೆಗೆ ಕೊರೊನಾ !

ಸೆಲ್ಫೀ ನೆಪದಲ್ಲಿ ಬಿಗ್ ಬಾಸ್ ಸ್ಪರ್ದಿಗೆ ಮುತ್ತಿಟ್ಟ ಅಭಿಮಾನಿ.. ಮರುದಿನವೇ ಬಂತು ಆಕೆಗೆ ಕೊರೊನಾ !

spot_img
- Advertisement -
- Advertisement -

ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬ ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ಹಿಂದಿ ಬಿಗ್​ ಬಾಸ್​ 14ನೇ ಸೀಸನ್​ನ ಸ್ಪರ್ಧಿ ಅರ್ಶಿ ಖಾನ್ ಗೆ ಮುತ್ತಿಟ್ಟಿದ್ದಾನೆ.

ಅರ್ಶಿ ಖಾನ್ ಸಾಮಾನ್ಯವಾಗಿ​ ಅಭಿಮಾನಿಗಳು ಸಿಕ್ಕಾಗ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದರು.ಅದೇ ರೀತಿ ಮುಂಬೈ ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳೋಕೆ ಬಂದಾಗ ಪೋಸ್​ ನೀಡಿದ್ದಾರೆ. ಅರ್ಶಿ ಸೆಲ್ಫಿಗೆ ಪೋಸ್​ ನೀಡಿ ಈಚೆ ತಿರುಗುತ್ತಿದ್ದಂತೆ ಅಭಿಮಾನಿ ಅವರ ಕೈ ತೆಗೆದುಕೊಂಡು ಮುತ್ತಿಟ್ಟಿದ್ದಾನೆ. ಈ ಘಟನೆಯಿಂದ ಅವರು ಶಾಕ್​ಗೆ ಒಳಗಾದಂತೆ ಕಂಡು ಬಂತು. ಆದರೆ, ಇದನ್ನು ಅರ್ಶಿ ಎಲ್ಲಿಯೂ ತೋರಿಸಿಕೊಳ್ಳಲಿಲ್ಲ.

ಅಭಿಮಾನಿ ಮುತ್ತಿಟ್ಟ ಘಟನೆ ಬಗ್ಗೆ ಕೇಳುತ್ತಿದ್ದಂತೆ ಅರ್ಶಿ ಏನು ಆಗೇ ಇಲ್ಲ ಎಂಬಂತೆ ನಡೆದುಕೊಂಡರು. ಅವರಿಂದ ಹೊರಡೋಣ ನಡೆಯಿರಿ ಎನ್ನುವ ಉತ್ತರ ಬಂತು. ಈ ಘಟನೆ ನಡೆದ ಮರುದಿನವೇ ಅರ್ಶಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಈ ಬಗ್ಗೆ ಪೋಸ್ಟ್ ಮಾಡಿದ್ದ ಅರ್ಶಿ ಖಾನ್​, ನನಗೆ ಕೊವಿಡ್​ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಅವರು ಕೋರಿದ್ದಾರೆ.

- Advertisement -
spot_img

Latest News

error: Content is protected !!