Thursday, May 2, 2024
Homeತಾಜಾ ಸುದ್ದಿಬೆಳ್ಳಿ ಪದಕ ಗೆದ್ದು ಪ್ಯಾರಾಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಠಿಸಿದ ಭಾವಿನಾಬೆನ್ ಪಟೇಲ್

ಬೆಳ್ಳಿ ಪದಕ ಗೆದ್ದು ಪ್ಯಾರಾಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಠಿಸಿದ ಭಾವಿನಾಬೆನ್ ಪಟೇಲ್

spot_img
- Advertisement -
- Advertisement -

ಟೋಕಿಯೊ; ಭಾರತದ ಭಾವಿನಬೆನ್ ಪಟೇಲ್ ಅವರು ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಟೇಬಲ್ ಟೆನಿಸ್ (ಟಿಟಿ) ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ .


ಜಪಾನ್ ರಾಜಧಾನಿ ಟೋಕಿಯೊದ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಸ್ಪರ್ಧೆಯ ಫೈನಲ್ ನಲ್ಲಿ ಚೀನಾದ ಜೋ ಯಿಂಗ್ ವಿರುದ್ಧ ಸೋತ ನಂತರ ಭಾವಿನಾಬೆನ್ ಬೆಳ್ಳಿ ಪದಕ ಗೆದ್ದರು.


ಜೋ ಯಿಂಗ್ ಮೊದಲ ಗೇಮ್ ಅನ್ನು 11-7ರಿಂದ ಗೆದ್ದರಲ್ಲದೇ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದರು. ಯಿಂಗ್ ಮುಂದಿನ ಸುತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿ ಇನ್ನೊಂದು ಆಟವನ್ನು 11-5ರಿಂದ ಗೆಲ್ಲುವಲ್ಲಿ ಯಶಸ್ವಿಯಾದಳು.

ತನ್ನ 12 ನೇ ವಯಸ್ಸಿನಲ್ಲಿ ಪೋಲಿಯೊ ಪತ್ತೆಯಾದ 34 ರ ಹರೆಯದ ಭಾವಿನಾ, ನಾನು ನನ್ನನ್ನು ಅಂಗವಿಕಲೆ ಎಂದು ಪರಿಗಣಿಸುವುದಿಲ್ಲ, ನಾನು ಏನನ್ನೂ ಮಾಡಬಲ್ಲೆ ಎಂದು ನನಗೆ ಯಾವಾಗಲೂ ವಿಶ್ವಾಸವಿದೆ. ನಾವು ಹಿಂದೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದೇನೆ. ಟೋಕಿಯೊದ ಪ್ಯಾರಾಲಿಂಪಿಕ್ಸ್ ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!