Wednesday, June 3, 2026
Homeತಾಜಾ ಸುದ್ದಿಮಕ್ಕಳನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಜೊತೆಯಾಗಿ ಭೇಟಿ ನೀಡಿದ ರೇವಣ್ಣ ದಂಪತಿ

ಮಕ್ಕಳನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಜೊತೆಯಾಗಿ ಭೇಟಿ ನೀಡಿದ ರೇವಣ್ಣ ದಂಪತಿ

- Advertisement -
- Advertisement -

ಬೆಂಗಳೂರು; ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಇಬ್ಬರು ಮಕ್ಕಳು ಕೂಡ ಜೈಲುಪಾಲಾಗಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ರೆ, ಅವರ ಅಣ್ಣ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ರೇವಣ್ಣ ಅವರ ಇಬ್ಬರು ಮಕ್ಕಳು ಕೂಡ ಸದ್ಯ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿದ್ದಾರೆ.

ಜುಲೈ 1 ರಂದು ಭವಾನಿ ರೇವಣ್ಣ ಜೈಲಿಗೆ ಭೇಟಿ ನೀಡಿ ಪ್ರಜ್ವಲ್ ರೇವಣ್ಣ ಅವರ ಜೊತೆ ಮಾತುಕತೆ ನಡೆಸಿದ್ರು. ಆದಾದ ಬೆನ್ನಲ್ಲೇ ಜುಲೈ 4 ರಂದು ರೇವಣ್ಣ ಭೇಟಿ ನೀಡಿದ್ದರು. ನಿನ್ನೆ ದಂಪತಿ ಜೊತೆಯಾಗಿ ಜೈಲಿಗೆ ಭೇಟಿ ನೀಡಿ ಇಬ್ಬರು ಮಕ್ಕಳ ಜೊತೆ ಮಾತುಕತೆ ನಡೆಸಿದ್ದಾರೆ.

ಮೊನ್ನೆ ಹೊಟ್ಟೆ ನೋವಿನಿಂದ ಸೂರಜ್ ಜೈಲಿನ ಆಸ್ಪತ್ರೆಗೆ ದಾಖಲಾಗಿದ್ದರು.ಈ ಹಿನ್ನೆಲೆ  ದಂಪತಿ ಮಗನ ಆರೋಗ್ಯ ವಿಚಾರಿಸಿದ್ದಾರೆ.

- Advertisement -

Latest News

error: Content is protected !!