Friday, July 4, 2025
Homeಕರಾವಳಿಧರ್ಮಸ್ಥಳದಲ್ಲಿ ಭಜನಾ ಪರಿಷತ್ ನ ಪದಾಧಿಕಾರಿಗಳ ಸಭೆ!

ಧರ್ಮಸ್ಥಳದಲ್ಲಿ ಭಜನಾ ಪರಿಷತ್ ನ ಪದಾಧಿಕಾರಿಗಳ ಸಭೆ!

spot_img
- Advertisement -
- Advertisement -

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ವಿವಿಧ ತಾಲೂಕಿನ ಪದಾಧಿಕಾರಿಗಳ ಸಭೆಯು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಇಂದು ನಡೆದಿದೆ.

ಜಿಲ್ಲೆಯ ತೀರ್ಥಹಳ್ಳಿ ಬೈಂದೂರು, ಬೆಳ್ತಂಗಡಿ, ಕಾರ್ಕಳ,ಮಂಜೇಶ್ವರ/ಕಾಸರಗೋಡು, ಕುಂದಾಪುರ, ಮಂಗಳೂರು, ಮತ್ತೂರು, ಸುಳ್ಯ ಉಡುಪಿ, ಬಂಟ್ವಾಳ, ಕಡಬ, ಕಡೂರು, ಶಿರಸಿ ಮೊದಲಾದ ಕಡೆಯಿಂದ ಭಜನಾ ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ವರ್ಷ ಧರ್ಮಸ್ಥಳದಲ್ಲಿ ಪೂಜ್ಯ ಡಾ ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ 23 ನೆಯ ಭಜನಾ ಕಮ್ಮಟದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಣಿಲ ಶ್ರೀಗಳು ಮಾತನಾಡುತ್ತಾ , ಧರ್ಮಸ್ಥಳದಲ್ಲಿ ಕಳೆದ 22 ವರ್ಷದಿಂದ ಭಜನಾ ಕಮ್ಮಟ ನಡೆಸುವ ಮೂಲಕ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಸಂಸ್ಕಾರ, ಮಾರ್ಗದರ್ಶನದ ಪ್ರಭಾವದಿಂದ ಮತ್ತು ಭಜನಾ ಕಮ್ಮಟದಿಂದ ಭಜನಾ ಮಂಡಳಿಗಳಲ್ಲಿ ಶಿಸ್ತು ಬಂದಿದೆ. ಭಜನಾ ಕಮ್ಮಟವು ಭಕ್ತಿಯ ಸಂಕೇತ ಭಜನಾ ಪರಿಷತ್ತಿನ ಪದಾಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಕಮ್ಮಟ ಯಶಸ್ವಿಗೊಳಿಸಬೇಕೆಂದು ಮಾತನಾಡಿದರು.


ಪ್ರಸ್ತುತ ವರ್ಷವು ಪರಿಷತ್ತಿನ ಕಾರ್ಯದರ್ಶಿ ಬಿ.ಜಯರಾಮ ನಲ್ಲಿತ್ತಾಯರವರು ರಾಜ್ಯದ 15 ಕ್ಕೂ ಮಿಕ್ಕಿದ ಭಜನಾ ಪರಿಷತ್‌ಗಳು ಮಾಡಿದ ವಿವಿಧ ಸಾಧನೆಗಳನ್ನು ಗುರುತಿಸಿದರು ಮತ್ತು ಮುಂದಿನ ದಿನಗಳಲ್ಲಿ ಭಜನಾ ಪರಿಷತ್‌ನ ಪದಾಧಿಕಾರಿಗಳ ಜವಬ್ದಾರಿಯನ್ನು ವಿವರಿಸಿದರು.

ಭಜನಾ ಕಮ್ಮಟದ ಸಂಯೋಜಕರಾದ ಸುಬ್ರಹ್ಮಣ್ಯ ಭಟ್ ಮಾತನಾಡುತ್ತಾ ಭಜನಾ ಪರಿಷತ್‌ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಕಳೆದ 22 ವರ್ಷಗಳಲ್ಲಿ ಭಜನಾ ಕಮ್ಮಟದ ಶಿಬಿರಾರ್ಥಿಗಳು ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ. ಪ್ರಸ್ತುತ ವರ್ಷ ಉತ್ತಮ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು.

ವರ್ಷದ ಕಮಟದ ಕಾರ್ಯದರ್ಶಿ ಶ್ರೀಮತಿ ಮಮಕಾರಾವ್ ಅವರು ಶಿಬಿರಾರ್ಥಿಗಳ ಆಯ್ಕೆ ಮತ್ತು
ಅನುಸರಿಸಬೇಕಾದ ಕ್ರಮಗಳ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಿದ್ದರು. ಆನ್‌ಲೈನ್ ಮುಖಾಂತರ ಅರ್ಜಿ ನೀಡಬೇಕೆಂದು ಕೋವಿಡ್-19 ನಿಯಮದಂತೆ ಈ ಬಾರಿಯೂ ಶಿಬಿರ ನಡೆಯುವಂತೆ ತಿಳಿಸಿದರು.

ರಾಜ್ಯದ ವಿವಿಧ ಭಾಗದಿಂದ ಬಂದ ಭಜನಾ ತಂಡದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮ್ಮ ಅನುಭವವನ್ನುಹಂಚಿಕೊಂಡರು, ಸಭೆಯಲ್ಲಿ ಭಜನಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪಂಜರವರು ಅಧ್ಯಕ್ಷತೆ ವಹಿಸಿಕೊಂಡು ಪ್ರಸ್ತುತ ವರ್ಷದ ಭಜನಾ ಕಮ್ಮಟ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಮತ್ತೂರು ತಾಲೂಕಿನ ಗೌರವಾಧ್ಯಕ್ಷರಾದ ಶ್ರೀ ಧನ್ಯ ಕುಮಾರ್ ರೈ, ಜನಜಾಗೃತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈ,ಉಪ್ಪಿನಂಗಡಿಯ ಭಜನಾ ಟ್ರಸ್ಟ್‌ನ ಶ್ರೀಮತಿ ಉಷಾ ಮುಳಿಯ ಅಡೂರು ವೆಂಕಟರಾವ್, ಶ್ರೀ ಸೀತಾರಾಮ,ತೊಳಾಡಿ, ಶ್ರೀ ಭುಜಬಲಿ ಧರ್ಮಸ್ಥಳ ಶುಭ ಹಾರೈಸಿದರು. ಶ್ರೀಮತಿ ಪರಮೇಶ್ವರಿ, ಬಳ್ಳಾಡು ಇವರ ಪ್ರಾರ್ಥನೆಯೊಂದಿಗೆ ಧರ್ಣಪ್ಪ ಮಾಸ್ಟರ್‌ರವರು ವಂದನಾರ್ಪಣೆ ಮಾಡಿದರು.

ಭಜನಾ ಪರಿಷತ್ತಿನ ವಿವಿಧ ತಾಲೂಕು ಸಮಿತಿಯ ಅಭಿಪ್ರಾಯದಂತೆ ಪ್ರಸ್ತುತ ವರ್ಷದ ಶಿಬಿರಾರ್ಥಿಗಳ
ಆಯ್ಕೆಯಲ್ಲಿ ಸುಮಾರು 200 ಕ್ಕೂ ಮಿಕ್ಕಿದ ಶಿಬಿರಾರ್ಥಿಗಳು ಭಾಗವಹಿಸಿರುವುದಾಗಿ ಅಭಿಪ್ರಾಯ ಮೂಡಿ ಬಂದಿತ್ತು.

- Advertisement -
spot_img

Latest News

error: Content is protected !!