Sunday, June 7, 2026
Homeಕರಾವಳಿಬಂಟ್ವಾಳ; ನೆಟ್ಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರವೀಣ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ...

ಬಂಟ್ವಾಳ; ನೆಟ್ಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರವೀಣ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ವಿದ್ಯಾರ್ಥಿಗಳ ಪೋಷಕರು ಹಾಗೂ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನ

- Advertisement -
- Advertisement -

ಬಂಟ್ವಾಳ; ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿನ  ಸಹ ಶಿಕ್ಷಕರಾದ ಪ್ರವೀಣ್ ಇವರಿಗೆ 2022 -23 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದ್ದು ಶಾಲಾ ಪೋಷಕರು ಮತ್ತು ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸಹ ಶಿಕ್ಷಕ ಪ್ರವೀಣ್ ಮಾತನಾಡಿ ಪ್ರಶಸ್ತಿಯ ಹಿಂದೆ ಈ ಶಾಲಾ ವಿಧ್ಯಾರ್ಥಿ ಗಳು, ಪೋಷಕರು, ಶಿಕ್ಷಕರು, ಊರವರ ಮತ್ತು ಸಂಘಸಂಸ್ಥೆಗಳ ಪ್ರೋತ್ಹಹದಿಂದ ಸಾಧ್ಯವಾಗಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿಯಾಗಿದ್ದೇನೆ, ಈ ಪ್ರಶಸ್ತಿಯು ಈ ಊರಿನ ಶಾಲಾಭಿಮಾನಿಗಳಿಗೆ ಸಂದ ಗೌರವವಾಗಿದೆ ಎಂದು ತಿಳಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಗೌರವದನವಾಗಿ ನೀಡಿದ ರೂ 5,000 /-ವನ್ನು ಶಾಲೆಯ ಅಭಿವೃದ್ಧಿಗೆ ಶಾಲಾಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

 ಈ ಸಂದರ್ಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳಿದ್ದ ಉತ್ತಮ ಶಿಕ್ಷಕ ಎನ್ನುವ ಪ್ರಹಸನ ಹಾಗೂ ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಪ್ರವೀಣರ ಬಗ್ಗೆ ಸ್ವ ಬರೆದ  ಚುಟುಕು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಲ್ಲಾ ಮಕ್ಕಳಿಗೆ ಶ್ರೀಮತಿ ನಳಿನಾಕ್ಷಿ ಈಶ್ವರ ಕುಲಾಲ್ ಕೊಡುಗೆಯಾಗಿ ನೀಡಿದ ಗುರುತಿನ ಕಾರ್ಡನ್ನು ವಿತರಿಸಲಾಯಿತು.

  ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಕುಲಾಲ್, ಉಪಾಧ್ಯಕ್ಷ ಶ್ರೀಮತಿ ಚಂಚಲಾಕ್ಷಿ, ನೆಟ್ಲಾಶಾಲಾ ನಿವೃತ್ತ ಮುಖ್ಯೋಪಾಧ್ಯಾಯಣಿ ಸೆಲಿನಾ ಪಿಂಟೋ, ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶೋಬಾಲತ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಮನೋಜ್ ವಂದಿಸಿದರು. ಕಲಾ ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು .

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು , ಹಿರಿಯ ವಿದ್ಯಾರ್ಥಿಗಳು,  ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಮಕ್ಕಳ ಪೋಷಕರು,ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!