Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸಕಲೇಶಪುರದಲ್ಲಿ ಯುವಕ ನಾಪತ್ತೆ; ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಬೆಳ್ತಂಗಡಿ : ಸಕಲೇಶಪುರದಲ್ಲಿ ಯುವಕ ನಾಪತ್ತೆ; ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ : ವಿಪರೀತ ಸಾಲಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಅವಿವಾಹಿತ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೇರ್ಹಳ್ಳಿ ಗ್ರಾಮದ ಅಭಿಷೇಕ್ (31) ಎಂಬಾತ ವಿಪರೀತ ಸಾಲ ಮಾಡಿಕೊಂಡ ಪರಿಣಾಮ ನೊಂದು ಮನೆಯಿಂದ ನಾಪತ್ತೆಯಾಗಿದ್ದವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಕಲೇಶಪುರ ನಿವಾಸದಿಂದ ಅಭಿಷೇಕ್ ಜ.9 ಕ್ಕೆ ನಾಪತ್ತೆಯಾಗಿ ನೇರ ಧರ್ಮಸ್ಥಳದ ನೇತ್ರಾವತಿ ನದಿಗೆ ಬಂದು ಮನೆಯವರಿಗೆ ‘ನನಗೆ ಸಾಲದ ಒತ್ತಡ ಜಾಸ್ತಿಯಾಗುತ್ತಿರುವ ಕಾರಣದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಮೆಸೇಜ್ ಮಾಡಿ ಬಳಿಕ ಕರೆ ಮೂಲಕ ‘ನಾನು ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಬಂದಿದ್ದು ನಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ನೇರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ನದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಜ.11 ರಂದು ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಅಭಿಷೇಕ್ ಮೃತದೇಹ ಕುಟುಂಬ ಸದಸ್ಯರಿಗೆ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಹೋದರ ಭರತ್.ಬಿ.ಎಮ್ ಎಂಬವರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!