Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಆಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ಆಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳ್ತಂಗಡಿ: ಆಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಆರ್ಲ ನಿವಾಸಿ ಗುಲಾಬಿ ಮೃತ ದುರ್ದೈವಿ.

ಗುಲಾಬಿ ಅವರ ಗಂಡ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಆಕೆ ಒಬ್ಬಳೇ ಮನೆಯಲ್ಲಿ ವಾಸಿಸುತ್ತಿದ್ದರು.ಫೆ.15ರಂದು ಮಧ್ಯಾಹ್ನದ ವೇಳೆ ಈಕೆ ಮನೆಯಲ್ಲಿ ಆಸಿಡ್ ಸೇವಿಸಿದ್ದು ಅಸ್ವಸ್ತರಾದ ಅವರನ್ನು ಕೂಡಲೇ ಉಜಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಈಕೆ ಫೆ.16 ರಂದು ಮೃತಪಟ್ಟಿದ್ದಾರೆ. ಮೃತ ಗುಲಾಬಿ ಅವರ ಮಗಳು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!