Wednesday, June 24, 2026
Homeಕರಾವಳಿಮಂಗಳೂರು ಬೆಳ್ತಂಗಡಿ: ಕೇಂದ್ರ ಬಜೆಟ್ ನಲ್ಲಿ ಕರಾವಳಿಯ ಅವಗಣನೆ ಖಂಡನಾರ್ಹ: ರಕ್ಷಿತ್ ಶಿವರಾಂ

 ಬೆಳ್ತಂಗಡಿ: ಕೇಂದ್ರ ಬಜೆಟ್ ನಲ್ಲಿ ಕರಾವಳಿಯ ಅವಗಣನೆ ಖಂಡನಾರ್ಹ: ರಕ್ಷಿತ್ ಶಿವರಾಂ

- Advertisement -
- Advertisement -

 ಬೆಳ್ತಂಗಡಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿಯ ಬಜೆಟ್ ನಲ್ಲಿ ಕರಾವಳಿಗೆ  ಯಾವುದೇ ಹೊಸ ಯೋಜನೆಗಳನ್ನಾಗಲಿ, ಅನುದಾನಗಳನ್ನು ಘೋಷಿಸದೆ ಅವಗಣನೆ ಮಾಡಿರುವುದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಅನ್ಯಾಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಾಂ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಕಳೆದ ಸುಮಾರು 25 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಸದರನ್ನೇ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿಕೊಡುತ್ತಿದ್ದರೂ ಕೇಂದ್ರ ಸರಕಾರ ಸತತವಾಗಿ ಕರಾವಳಿ ಭಾಗಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!