Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಪಿಕಪ್ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಪಿಕಪ್ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಪಿಕಪ್ ಪಲ್ಟಿಯಾಗಿದ್ದು, 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.ಪಿಕಪ್ ವಾಹನದಲ್ಲಿದ್ದವರು ಆಂಧ್ರಪ್ರದೇಶ ಮತ್ತು ಬಳ್ಳಾರಿ ಮೂಲದವರು ಎಂದು ಗುರುತಿಸಲಾಗಿದೆ.

ವಾಹನವು ಆರನೇ ತಿರುವಿನಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪಲ್ಟಿಯಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಚಾರ್ಮಾಡಿಯ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯ ಆರಂಭಿಸಿದೆ. ಧನ್ವಿ ಆಂಬುಲೆನ್ಸ್ ಉಜಿರೆ, ಹಸನಬ್ಬ ರಾಜ್ಯೋತ್ಸವ ಸೇವಾ ಆಂಬುಲೆನ್ಸ್ ಹಾಗೂ ‘SKSSF ಕಕ್ಕಿಂಜೆ ಅಂಬುಲೆನ್ಸ್’ ಜೊತೆಗೆ ಸ್ಥಳೀಯ ರಿಕ್ಷಾ ಮತ್ತು ಖಾಸಗಿ ಕಾರುಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಗಾಯಗೊಂಡ ಎಲ್ಲಾ 25ಕ್ಕೂ ಅಧಿಕ ಪ್ರಯಾಣಿಕರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ,

- Advertisement -

Latest News

error: Content is protected !!