- Advertisement -
- Advertisement -
ಚಿಕ್ಕಮಗಳೂರು: ಕಾರು-ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬೆಳ್ತಂಗಡಿಯ ಯುವಕ ಸಾವನ್ನಪ್ಪಿರುವ ಘಟನೆ ಗುರುವಾರ ಎನ್.ಆರ್.ಪುರ ಎಂಬಲ್ಲಿ ನಡೆದಿದೆ.
ಓಡಿಲ್ನಾಳದ ಕುಂದಲಿಕೆ ನಿವಾಸಿ ಶಜಿ ಎಂಬುವವರ ಪುತ್ರ ಸುಜೇಶ್ (26) ಮೃತ ಯುವಕ.
ಎನ್.ಆರ್.ಪುರಕ್ಕೆ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಕ್ಕೆಂದು ತೆರಳಿದ್ದ ಯುವಕ, ಗುರುವಾರ ಮಧ್ಯಾಹ್ನ ಕೆಲಸದಿಂದ ಊಟ ಮಾಡಲೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಸವಾರನಿಗೆ ತೀವ್ರ ಗಂಭೀರ ಗಾಯವಾಗಿದ್ದು, ಕೂಡಲೇ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಯುವಕ ಸಾವಿಗೀಡಾಗಿದ್ದಾರೆ.
- Advertisement -