Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ರಾ.ಹೆ.ಗುತ್ತಿಗೆದಾರ ಡಿ.ಪಿ.ಜೈನ್ ಕಂಪನಿಯ ಕಾರ್ಮಿಕ ಆತ್ಮಹತ್ಯೆಗೆ ಯತ್ನ; ಸಂಬಳ ನೀಡದ ಹಿನ್ನೆಲೆ ಮನನೊಂದು...

ಬೆಳ್ತಂಗಡಿ : ರಾ.ಹೆ.ಗುತ್ತಿಗೆದಾರ ಡಿ.ಪಿ.ಜೈನ್ ಕಂಪನಿಯ ಕಾರ್ಮಿಕ ಆತ್ಮಹತ್ಯೆಗೆ ಯತ್ನ; ಸಂಬಳ ನೀಡದ ಹಿನ್ನೆಲೆ ಮನನೊಂದು ಕೃತ್ಯ.?

- Advertisement -
- Advertisement -

ಬೆಳ್ತಂಗಡಿ: ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ  ಡಿ.ಪಿ ಜೈನ್ ಕಂಪನಿಯ ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆ.6 ರಂದು ಸಂಜೆ ನಡೆದಿದೆ.

ಡಿ.ಪಿ.ಜೈನ್ ಕಂಪನಿಯಲ್ಲಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ನಾಗಪುರ ಮೂಲದ  ಪ್ರಮೋದ್ ಜಾಡೆ (31)  ಎಂಬಾತ ಪ್ಲಾಂಟೇಷನ್ ನಲ್ಲಿ ಲಾರಿಯ ಸೀಟ್ ಬೆಲ್ಟ್ ನಿಂದ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಅಲ್ಲಿದ್ದ ಇತರ ನೌಕರರು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ  ದಾಖಲಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ತಂದೆ ಸಾವನ್ನಪ್ಪಿದ್ದು ಈ ಬೇಸರದಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುವುದಾಗಿ ಮಾಹಿತಿ ಇದೆ. ಮೂಲಗಳ ಪ್ರಕಾರ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಡಿ.ಪಿ.ಜೈನ್ ಕಂಪನಿಯ ಗುತ್ತಿಗೆದಾರ ಸರಿಯಾಗಿ ಸಂಬಳ ನೀಡದೇ ಇರೋದರಿಂದ ಆ.5 ರಂದು ಒಡಿಲ್ನಾಳ  ಡಿ.ಪಿ. ಜೈನ್ ಪ್ಲಾಂಟೇಷನ್ ನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಈತ ಆತ್ಮಹತ್ಯೆಗೆ ಯತ್ನಿಸಿರೋದು ಅನುಮಾನ ಮೂಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಬೇಕಾಗಿದೆ‌

- Advertisement -

Latest News

error: Content is protected !!