Saturday, June 28, 2025
Homeಕರಾವಳಿಬೆಳ್ತಂಗಡಿ : ಕಳೆಂಜ ಬಿಜೆಪಿ ವಿಜಯೋತ್ಸವ ರಸ್ತೆಯಲ್ಲಿ ಮಾಡಿರುವುದು : ಕುಶಾಲಪ್ಪ ಗೌಡರು ಅಲ್ಲಿಗೆ ಬಂದು...

ಬೆಳ್ತಂಗಡಿ : ಕಳೆಂಜ ಬಿಜೆಪಿ ವಿಜಯೋತ್ಸವ ರಸ್ತೆಯಲ್ಲಿ ಮಾಡಿರುವುದು : ಕುಶಾಲಪ್ಪ ಗೌಡರು ಅಲ್ಲಿಗೆ ಬಂದು ಬೆದರಿಕೆ ಹಾಕಿದ್ದು  ಶ್ರೀನಿವಾಸ ರಾವ್ ಹೇಳಿಕೆ 

spot_img
- Advertisement -
- Advertisement -

ಬೆಳ್ತಂಗಡಿ : ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನ ಕಳಂಜದಲ್ಲಿ ಬಿಜೆಪಿ ವಿಜಯೋತ್ಸವ ಕುಶಾಲಪ್ಪ ಗೌಡರ ಮನೆಯ 100 ಮೀಟರ್ ಅಂತರದ ಆಸುಪಾಸಿನ ರಸ್ತೆಯಲ್ಲಿ ನಡೆದಿರುವುದು. ಅಲ್ಲಿಗೆ ಕುಶಾಲಪ್ಪ ಗೌಡ ಏಕಾಏಕಾಗಿ ಬಂದು ಬೆದರಿಕೆ ಹಾಕಿ ರಾಜೇಶ್ ಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿ ಕೊಲೆಯ ಪ್ರಯತ್ನ ನಡೆಸಿದ್ದಾರೆ  ಈ ಘಟನೆಯನ್ನು ಖಂಡಿಸುತ್ತೇವೆ ಎಂದು ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ ರಾವ್ ಹೇಳಿದರು, ಅವರು ಜೂ.6 ರಂದು ಗುರುವಾಯನಕೆರೆಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಹಲವು ಶಾಸಕರು ಸೇವೆ ಸಲ್ಲಿಸಿದರು ಉತ್ತಮ ರೀತಿಯಲ್ಲಿ ಸೇವಾ ಕಾರ್ಯ ನಡೆಸಿದ್ದಾರೆ. ಆದರೆ 2023ರಿಂದ ತಾಲೂಕಿನಲ್ಲಿ ರಾಜಕೀಯ ವೈಷಮ್ಯದಿಂದ ಕೀಲು ಮಟ್ಟದ ರಾಜಕೀಯವಾಗಿದೆ.

ಕುಶಾಲಪ್ಪ ಗೌಡರವರು ಕಾಂಗ್ರೆಸ್ ಕಾರ್ಯಕರ್ತನಾಗಿ ಕಳೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ದುಡಿದಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತ ಅಲ್ಲ ಎಂದು ಹೇಳುವುದು ಸುಳ್ಳು.

ಬಿಜೆಪಿ ಯುವಮೋರ್ಚಾ ಅಧ್ಯಕ್ಷರನ್ನು ವಿನಾ ಕಾರಣ ಜೈಲಿಗೆ ಕಳುಹಿಸುವ ಸಂಚು ಮಾಡಿದ್ದಾರೆ ಎಂದು ಆರೋಪಿದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ರಾಜ್ಯ ಸಮಿತಿ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!