Thursday, June 20, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಮಕ್ಕಳ ಆರೋಗ್ಯದ ಗಮನ ಹರಿಸಲು ಲೋಕಾಯುಕ್ತ ಅಧಿಕಾರಿಗಳಿಂದ ಸೂಚನೆ

ಬೆಳ್ತಂಗಡಿ : ಮಕ್ಕಳ ಆರೋಗ್ಯದ ಗಮನ ಹರಿಸಲು ಲೋಕಾಯುಕ್ತ ಅಧಿಕಾರಿಗಳಿಂದ ಸೂಚನೆ

spot_img
- Advertisement -
- Advertisement -

 ಬೆಳ್ತಂಗಡಿ : ಪದವಿಪೂರ್ವ ಕಾಲೇಜು ಬೆಳ್ತಂಗಡಿ ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭೇಟಿ ನೀಡಿ ವಸತಿ ನಿಲಯದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು.ಕುಡಿಯುವ  ನೀರು, ಅಡುಗೆಕೋಣೆ,  ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗಳ ಪರಿಶೀಲನೆ ಮಾಡಿದ ಅಧಿಕಾರಿಗಳು ವಸತಿನಿಲಯದ ಮೇಲ್ವಿಚಾರಕರಿಂದ ಮಾಹಿತಿ ಪಡೆದರು. ಅಡುಗೆ ಕೋಣೆ ಪರಿಶೀಲಿಸಿದ ಅಧಿಕಾರಿಗಳು ಆಹಾರ ದಾಸ್ತಾನು ಡಬ್ಬಗಳ ಪರಿಶೀಲನೆ ಮಾಡಿದರು.ಮಳೆಗಾಲದಲ್ಲಿ ಮಕ್ಕಳಿಗೆ ಬಿಸಿ ನೀರು ಕೊಡಬೇಕು, ಸಣ್ಣ ಪುಟ್ಟ ಅನಾರೋಗ್ಯ ಕಂಡು ಬಂದರೆ ತಕ್ಷಣ ಸ್ಥಳೀಯ ಆರೋಗ್ಯಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

ಈ ಬಗ್ಗೆ ನಿರ್ಲಕ್ಷ್ಯ ಕಂಡುಬಂದರೆ ಲೋಕಾಯುಕ್ತ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.         ವಿದ್ಯಾರ್ಥಿಗಳಲ್ಲಿ ಮಾಹಿತಿ ಸಂಗ್ರಹಿಸಿದ ಅದಿಕಾರಿಗಳು ಅಹಾರ ವ್ಯವಸ್ಥೆ, ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದ ಅವರು ವಸತಿ ನಿಲಯದಲ್ಲಿ ಸಮಸ್ಯೆ ಬಂದರೆ ಲೋಕಾಯುಕ್ತಕ್ಕೆ ದೂರು ನೀಡಲು ತಿಳಿಸಿದರು.  ವಸತಿನಿಲಯದ ವಿದ್ಯಾರ್ಥಿಗಳು 100% ಫಲಿತಾಂಶ ಪಡೆದ ಬಗ್ಗೆ ವಸತಿನಿಲಯದ ಕಲ್ಯಾಣಾಧಿಕಾರಿ ಜೋಸೆಫ್ ಮಾಹಿತಿ ನೀಡಿದರು.ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು ಸ್ಥಳೀಯ ಸಂಘ ಸಂಸ್ಥೆಗಳ ಸಂಪರ್ಕ ಪಡೆದು ಇಂತಹ ವಿದ್ಯಾರ್ಥಿಗಳಿಗೆ, ವಸತಿನಿಲಯದ ಸಿಬ್ಬಂದಿ ಗುರುತಿಸಬೇಕು ಎಂದು ಸೂಚಿಸಿದರು.

ವಸತಿ ನಿಲಯದ ಅಧಿಕಾರಿ ಜೋಸೆಪ್ ಮಾಹಿತಿ ನೀಡಿ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಸ್ಥಳದ ಅಭಾವವಿದೆ.ಮಕ್ಕಳ ಸಂಖ್ಯೆ ಕಡಿಮೆ ಮಾಡಿದರೆ ಇರುವ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಇಲ್ಲಿ ದಾಖಲಾತಿ 125 ಕ್ಕೆ ಅವಕಾಶ ಇದ್ದರು ಈಗ 110 ಮಕ್ಕಳನ್ನು ದಾಖಲಾತಿ ಮಾಡಲಾಗಿದೆ. ಎಲ್ಲಾ ವಸತಿ  ನಿಲಯದ ಸುತ್ತ ಸಿ.ಸಿ.ಕ್ಯಾಮಾರ ಅಳವಡಿಸಲಾಗಿದೆ.ರಾತ್ರಿ ಹೊತ್ತು ಸಿಬ್ಬಂದಿ ವಾಸ್ತವ್ಯ ಇದ್ದು  ಮಕ್ಕಳ ಸುರಕ್ಷತೆಗೆ ಗಮನ ಹರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ನಿವೇಶನ ಸಮಸ್ಯೆ ಸರಕಾರ ವಸತಿ ನಿಲಯ ಮಂಜೂರು ಗೊಳಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ‌ ಕಡೆ ಸರಕಾರಿ ನಿವೇಶನ ಸಿಗುತ್ತಿಲ್ಲ. ದೂರದ ಹಳ್ಳಿ ಪ್ರದೇಶದಲ್ಲಿ ವಸತಿ ನಿಲಯ ಮಾಡಿದರೆ ಮಕ್ಕಳಿಗೆ ಹೋಗುಬರುವ ಇನ್ನೊಂದು ಸಮಸ್ಯೆಯಾಗುತ್ತದೆ ಈ ಬಗ್ಗೆ ಕಂದಾಯ ಅಧಿಕಾರಿಗಳು ಗಮನ ಹರಿಸಿದರೆ ಒಳ್ಳೆಯದು ಎಂದು ಲೋಕಾಯುಕ್ತ ಅಧಿಕಾರಿಗಳ ಬಳಿ ವಸತಿ ನಿಲಯದ ಅಧಿಕಾರಿಗಳು ಪ್ರಸ್ತಾಪಿಸಿದರು. ಈ ಬಗ್ಗೆ ಮಾಹಿತಿ ಕೊಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.           

ಲೋಕಾಯುಕ್ತ ನಿಯಮ 26 ರಲ್ಲಿ ಅಂಗನವಾಡಿ, ವಸತಿ ನಿಲಯದ ದಿಢೀರ್ ಬೇಟಿ ಮಾಡಿ ಪರಿಶೀಲನೆ ಮಾಡುವ ನಿಯಮವಿದ್ದು ಅದರಂತೆ ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ಪರಿಶೀಲನೆ ಮಾಡಲಾಗಿದೆ .ಇಲ್ಲಿನ ಮಕ್ಕಳ ಫಲಿತಾಂಶ ಉತ್ತಮವಾಗಿದೆ.ಬಹುತೇಕ ಉತ್ತಮ ವ್ಯವಸ್ತೆಗಳಿವೆ.ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿ.ಕೆಲವೊಂದು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದು ಈ ಬಗ್ಗೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದು  ಲೋಕಾಯುಕ್ತ ಇನ್ಸ್ಪೆಕ್ಟರ್ ಅಮಾನುಲ್ಲಾ ತಿಳಿಸಿದರು.

ಲೋಕಾಯುಕ್ತ ಎಸ್.ಪಿ.ನಟರಾಜ್ ಮಾರ್ಗದರ್ಶನದಲ್ಲಿ ಇನ್ಪೆಕ್ಟರುಗಳಾದ ಚಂದ್ರಶೇಖರ ಸಿ.ಎಲ್, ಚಂದ್ರಶೇಖರ ಕೆ.ಎನ್, ಅಮಾನುಲ್ಲಾ, ಸಿಬ್ಬಂದಿ ವಿನಾಯಕ್,ಮಹೇಶ್,ಪಾಪಣ್ಣ ಪರಿಶೀಲನೆ ನಡೆಸಿದರು.

- Advertisement -
spot_img

Latest News

error: Content is protected !!