ಬೆಳ್ತಂಗಡಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇಂದು ಬೆಳ್ತಂಗಡಿ ತಾಲೂಕು ಸಮದಾಯ ಸರಕಾರಿ ಆಸ್ಪತ್ರೆಗೆ ಎರಡನೇ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಆಸ್ಪತ್ರೆಗೆ ಈ ಹಿಂದೆ ಭೇಟಿ ನೀಡಿದಾಗ ಡಯಾಲಿಸೀಸ್ ಕೇಂದ್ರದಲ್ಲಿರುವ 12 ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದ್ದನ್ನು ಇನ್ನೂ ರಿಪೇರಿ ಮಾಡದ ಬಗ್ಗೆ ಸದಸ್ಯರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು .ಡಯಾಲೀಸಸ್ ಕೇಂದ್ರದ ಮೂಲಬೂತ ಸೌಕರ್ಯಗಳ ಬಗ್ಗೆ ಬೆಳ್ತಂಗಡಿಗೆ ಭೇಟಿ ನೀಡಲಿರುವ ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಸದಸ್ಯರು ತಿಳಿಸಿದರು.
ಡಯಾಲೀಸಸ್ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರ ಜೊತೆ ಇರುವವರು ಒಳಗೆ ಹೋಗುವಾಗ ಮಾಸ್ಕ್ ಧರಿಸಲು ಸೂಚನೆ ನೀಡದ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿ , ಇನ್ನೊಮ್ಮೆ ಈ ರೀತಿಯ ಬೇಜಾವಬ್ದಾರಿ ಕಂಡು ಬಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗುವುದು. ದಿನನಿತ್ಯ ರೋಗಿಗಳನ್ನು ಪರೀಕ್ಷೆ ಮಾಡದಿರುವ ಬಗ್ಗೆ ರೋಗಿಗಳು ದೂರಿದರು. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪುರುಷರ , ಮಹಿಳೆಯರ, ಮಕ್ಕಳ ICU ಖಾಲಿಯಾಗಿದ್ದರೂ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸುವ ಬಗ್ಗೆ ಅಡಳಿತ ವೈದ್ಯಾಧಿಕಾರಿಗಳ ಗಮನ ಸೆಳೆಯಲಾಯಿತು. ತಾಲೂಕು ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಸ್ಕ್ಯಾನಿಂಗ್ ಯಂತ್ರ ಹದಗೆಟ್ಟಿದರೂ ಅದರ ಬಗ್ಗೆ ಗಮನ ಹರಿಸದ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದ ಸದಸ್ಯರು ಇಂತಹ ನಿರ್ಲಕ್ಷ್ಯ ಸಲ್ಲದು , ಇನ್ನೊಮ್ಮೆ ಇಂತಹ ನಿರ್ಲಕ್ಷ್ಯ ಕಂಡು ಬಂದರೆ ಸಹಿಸಲು ಸಾದ್ಯವಿಲ್ಲ ಎಂದರು. ಕಳೆದ ಭೇಟಿಯ ನಂತರ ಸಾಕಷ್ಟು ಸ್ವಚ್ಛತೆಗೆ ಗಮನ ಹರಿಸಿದ ಬಗ್ಗೆ ಸದಸ್ಯರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ , ಜಯರಾಂ ಮಲೆಕುಡಿಯ ಆಲಂಗಾರು , ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು ,ಪಿ.ಟಿ ಸೆಬಾಸ್ಟಿಯನ್ ಕಳೆಂಜ , ಸವಿತಾ ಅಟ್ರಿಂಜೆ ,ವೀರೇಂದ್ರ ಕುಮಾರ್ ಜೈನ್ ಅಳದಂಗಡಿ ,ಸ್ಟೀವನ್ ಮೋನಿಸ್ ,ವೆಂಕಣ್ಣ ಕೊಯ್ಯೂರು , ಶ್ರೀಮತಿ ವನಿತಾ ಸಾಲ್ಯನ್ ,ರಶೀದ್ ಕಕ್ಕಿಂಜೆ ಉಪಸ್ಥಿತರಿದ್ದರು.


