ಬೆಳ್ತಂಗಡಿ: ಇಲ್ಲಿನ ಬಂಗಾಡಿ ರಸ್ತೆಯಲ್ಲಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಮತ್ತು ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಆಕ್ಟಿವಾ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಬೆಳ್ತಂಗಡಿಯ ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ ಪ್ರತಿಶಾ ಅವರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕಿಲ್ಲೂರು ಕಡೆಯಿಂದ ಲಾಯಿಲ ಬರುತ್ತಿದ್ದ ಗೋಪಾಲಕೃಷ್ಣ ಎಂಬವರ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರತೀಶಾ ರವರ ತಲೆಗೆ, ಮುಖಕ್ಕೆ, ಮೈ ಕೈಗೆ, ತೀವ್ರ ಗಾಯವಾಗಿದೆ. ಅಲ್ಲದೇ ಗೋಪಾಲಕೃಷ್ಣ ರವರ ತಲೆಗೆ ಮುಖಕ್ಕೆ ಮೈ ಕೈ ಗೂ ತೀವ್ರ ಗಾಯವಾಗಿದೆ. ಕೂಡಲೇ ಪ್ರತಿಶಾ ರವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇನ್ನು ಗೋಪಾಲಕೃಷ್ಣ ರವರನ್ನು ಚಿಕಿತ್ಸೆಗೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತ ಗೋಪಾಲಕೃಷ್ಣ ಅವರು ಕರಿಯಾಲು ಮನೆ ಕಿಲ್ಲೂರು ಮೂಲದ ಜನಾರ್ದನ ಗೌಡ ಅವರ ಪುತ್ರ. ಈ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.