Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ ರೋಟರಿ...

ಬೆಳ್ತಂಗಡಿ : ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ ರೋಟರಿ ಕ್ಲಬ್ ಹಾಗೂ ಕಾನ್ ಫಿನ್ ಹೋಮ್ಸ್ ಸಹಕಾರ

- Advertisement -
- Advertisement -

ಬೆಳ್ತಂಗಡಿ :ಸಿಯೋನ್ ಆಶ್ರಮದ ನಿವಾಸಿಗಳ ಸುಖಕರ ವಾಸ್ತವ್ಯಕ್ಕಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಇಂದಿರಾನಗರ (ಬೆಂಗಳೂರು) ಅವರ ಮುಂದಾಳತ್ವದಲ್ಲಿ ಕಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಒಟ್ಟು 135 ಮಂಚಗಳು, ಹಾಸಿಗೆಗಳು, ಬೆಡ್‌ಶೀಟ್‌ಗಳು ಮತ್ತು ತಲೆದಿಂಬುಗಳು ಕೊಡುಗೆಯಾಗಿ ನೀಡಲಾಯಿತು.

ಈ ಕೊಡುಗೆಗಳ ಉದ್ಘಾಟನಾ ಕಾರ್ಯಕ್ರಮವು 06.03.2026 ರಂದು ನಡೆಯಿತು. ಕಾರ್ಯಕ್ರಮವನ್ನು ಕಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಪ್ರಶಾಂತ್ ಜೋಯಿಷಿ ಅವರು ಉದ್ಘಾಟಿಸಿ, ಅಶಕ್ತರು, ಅನಾಥರು ಹಾಗೂ ನಿರಾಶ್ರಿತರಿಗೆ ಆಶ್ರಯ ಮತ್ತು ಆರೈಕೆ ನೀಡುತ್ತಿರುವ ಸಿಯೋನ್ ಆಶ್ರಮದ ಮಹತ್ತರ ಸೇವೆಯನ್ನು ಶ್ಲಾಘಿಸಿದರು. ಜೊತೆಗೆ ಸಂಸ್ಥೆಯ ಮುಂದಿನ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಪ್ರಕಾಶ್ ಪ್ರಭು, ಹಿಂದಿನ ಅಧ್ಯಕ್ಷ ಶ್ರೀ ಅನಂತ ಭಟ್ ಮಚ್ಚಿಮಲೆ, ರೋಟರಿ ಪ್ರಾಜೆಕ್ಟ್ ಚೇರ್ಮನ್ ಶ್ರೀ ಅಬುಬಕ್ಕರ್, ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ., ಲೆಕ್ಕಾಧಿಕಾರಿ ಸೌಮ್ಯ ಯು.ಪಿ., ಸಂಸ್ಥೆಯ ಆಡಳಿತ ವರ್ಗದವರು, ಸಿಬ್ಬಂದಿ ವರ್ಗ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!