Saturday, June 6, 2026
Homeಕರಾವಳಿಪಡುಬಿದ್ರೆ ಬೀಚ್‍ ನಲ್ಲಿ 'ಬೀಚ್ ಸಚ್ಛತಾ ಸ್ಪರ್ಧೆ' ; 685 ಕೆ.ಜಿ ಕಸ ಸಂಗ್ರಹ

ಪಡುಬಿದ್ರೆ ಬೀಚ್‍ ನಲ್ಲಿ ‘ಬೀಚ್ ಸಚ್ಛತಾ ಸ್ಪರ್ಧೆ’ ; 685 ಕೆ.ಜಿ ಕಸ ಸಂಗ್ರಹ

- Advertisement -
- Advertisement -

ಪಡುಬಿದ್ರೆ : ಪಡುಬಿದ್ರೆ ಬೀಚ್‍ ನಲ್ಲಿ ಅಂತರ್ ರಾಷ್ಟ್ರಿಯ ಕಡಲ ತೀರದ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಬೀಚ್ ಸ್ವಚ್ಛತಾ ಸ್ಪರ್ಧೆಯಲ್ಲಿ ಒಟ್ಟು 685 ಕೆ.ಜಿ. ಜೈವಿಕ ವಿಘಟನೀಯವಲ್ಲದ ಕಸವನ್ನು ಸಂಗ್ರಹ ಮಾಡಲಾಗಿದೆ.

ಪಡುಬಿದ್ರೆ ಬೀಚ್‍ ನಿಂದ ಬ್ಲೂ ಫ್ಲ್ಯಾಗ್ ಬೀಚಿನ ತನಕ 1.7 ಕಿ.ಮೀ ಉದ್ದದ ಕಡಲ ತೀರವನ್ನು ಸ್ವಚ್ಛಗೊಳಿಸಲಾಗಿದ್ದು, ಸ್ಪರ್ಧೆಯಲ್ಲಿ ಐದು ತಂಡಗಳಲ್ಲಿ ಒಟ್ಟು 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪಡುಬಿದ್ರೆ ಬೀಚ್‍ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಪ್ರಥಮ ಬಹುಮಾನ ಹಾಗೂ ವಿಜಯಾ ಕಾಲೇಜು ಮುಲ್ಕಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕ್ಲಿಫರ್ಡ್ ಲೋಬೊ ಮಾತನಾಡಿ, ಕಡಲ ತೀರದ ಸ್ವಚ್ಛವಾಗಿ ಇಡುವ ಮೂಲಕ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಲು ಸಹಕಾರಿಯಾಗುತ್ತದೆ. ಈ ಮೂಲಕ ಕಡಲ ತೀರವನ್ನು ಸ್ವಚ್ಛವಾಗಿ ಇಡಬೇಕು ಎಂದು ಸಲಹೆ ನೀಡಿದರು.

ಸಾಯಿರಾಧ ಗ್ರೂಪ್‍ನ ಮನೋಹರ ಶೆಟ್ಟಿ, ಕಾಡಿಪಟ್ನ ಮೊಗವೀರ ಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ತುಂಗಭದ್ರಾ ಸರ್ವಿಸಸ್‍ನ ಗಣೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಬ್ಲೂ ಫ್ಲ್ಯಾಗ್ ಬೀಚ್ ಮ್ಯಾನೇಜರ್ ವಿಜೇತ್ ನಾಯಕ್ ಸ್ವಾಗತಿಸಿದರು. ಬೀಚ್ ಸುಪರ್ವೈಸರ್ ಕಿರಣ್ ರಾಜ್ ಕರ್ಕೇರ ವಂದಿಸಿದರು. ಸಿಬ್ಬಂದಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!