Sunday, June 7, 2026
Homeಕರಾವಳಿಬಂಟ್ವಾಳ : ಭರದಿಂದ ಸಾಗುತ್ತಿರುವ ಬಿ.ಸಿ.ರೋಡು - ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ!

ಬಂಟ್ವಾಳ : ಭರದಿಂದ ಸಾಗುತ್ತಿರುವ ಬಿ.ಸಿ.ರೋಡು – ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ!

- Advertisement -
- Advertisement -

ಬಂಟ್ವಾಳ : ಹಲವು ವರ್ಷಗಳಿಂದ ಕಾಮಗಾರಿಯೇ ಕಾಣದ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು – ಅಡ್ಡಹೊಳೆ ಚತುಷ್ಪಥ (63 ಕಿ.ಮೀ) ಈ ಬಾರಿ ಕೆಲಸವು ಬಿರುಸಿನಿಂದ ಆರಂಭಗೊಂಡಿದ್ದು, ಕಲ್ಲಡ್ಕ ಪೇಟೆಯ ಇಕ್ಕೆಲ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದೆ.

ಕಲ್ಲಡ್ಕದಲ್ಲಿ 6 ಲೇನ್ ಫ್ಲೈ ಓವರ್ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡಿದ್ದು, ಕಟ್ಟಡಗಳ ತೆರವು ಕಾರ್ಯವು ಕಲ್ಲಡ್ಕದ‌ ಚಿತ್ರಣವನ್ನೇ ಬದಲಿಸುತ್ತಿದೆ. ಕಟ್ಟಡಗಳ ತೆರವಿಗೆ ಅಕ್ಟೋಬರ್ 10ರ ಗಡುವನ್ನು ಇಲಾಖೆಯ ಅಧಿಕಾರಿಗಳು ನೀಡಿದ್ದು, ಪ್ರಸ್ತುತ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದೆ. ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದ್ದು, ಸ್ವಾಧೀನಗೊಂಡ ಜಮೀನು, ಕಟ್ಟಡಗಳ ತೆರವು ಪ್ರಕ್ರಿಯೆ ಮುಗಿದ ತಕ್ಷಣವೇ 63 ಕಿ.ಮೀ. ಹೆದ್ದಾರಿಯ ಎಲ್ಲ ಕಾಮಗಾರಿಗಳು ಒಂದೇ ಸಮಯದಲ್ಲಿ ಆರಂಭಗೊಳ್ಳಲಿದೆ. ಅಕ್ಟೋಬರ್ 12 ರ ಬಳಿಕ ಕಾಮಗಾರಿ ವೇಗಪಡೆದುಕೊಳ್ಳಲಿದೆ. ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್‌ನ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ 1,100.88 ಕೋ.ರೂ.ಗಳಿಗೆ ವಹಿಸಿಕೊಂಡಿದೆ.

ಇನ್ನು ಕಲ್ಲಡ್ಕದ ಹೆಸರಾಂತ ಕೆ.ಟಿ ಯ ಹೋಟೆಲ್ ಲಕ್ಷ್ಮೀ ನಿವಾಸವು 65 ವರ್ಷಗಳ ಇತಿಹಾಸ ಹೊಂದಿದ್ದು, ಈ ಕಟ್ಟಡವೂ ರಸ್ತೆ ಅಗಲೀಕರಣದ ಕಾರಣಕ್ಕೆ‌ ನೆಲಸಮವಾಗಲಿದೆ. ಅ.10 ಕ್ಕೆ ಇದು ಕಾರ್ಯಸ್ಥಗಿತಗೊಳಿಸಲಿದೆ. ಮುಂದಿನ‌ ನವೆಂಬರ್ ಅಂತ್ಯದ ಒಳಗಾಗಿ ಈಗಿನ ಕೆ.ಟಿ ಹೋಟೆಲ್ ಕಟ್ಟಡದ ಹಿಂಭಾಗದಲ್ಲಿ ಸುಸಜ್ಜಿತ ಹೋಟೆಲ್ ಅನ್ನು ನಿರ್ಮಿಸುವುದಾಗಿ ಮಾಲಕ ಶಿವರಾಮ ಹೊಳ್ಳ ತಿಳಿಸಿದ್ದಾರೆ.

- Advertisement -

Latest News

error: Content is protected !!