Thursday, June 4, 2026
Homeಅಪರಾಧಪ್ರಿಯಕರನಿಂದಲೇ ಪ್ರೇಯಸ್ಸಿಯ ಬರ್ಬರ ಹತ್ಯೆ

ಪ್ರಿಯಕರನಿಂದಲೇ ಪ್ರೇಯಸ್ಸಿಯ ಬರ್ಬರ ಹತ್ಯೆ

- Advertisement -
- Advertisement -

ಬೆಂಗಳೂರು: ಯುವಕನೋರ್ವ ತನ್ನ ಪ್ರೇಯಸಿಯ ಎದೆಗೆ ಚಾಕು ಇರಿದು ಹಲ್ಲೆಗೈದು ಪರಾರಿಯಾಗಿರುವ ಘಟನೆ ಇಂದಿರಾನಗರದ 2ನೇ ಹಂತದಲ್ಲಿರುವ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಕೊಲೆಯಾದ ಯುವತಿ ಅಸ್ಸಾಂ ಮೂಲದ ಮಾಯಾ ಗೋಗೋಯಿ (19) ಎನ್ನಲಾಗಿದೆ. ಆರೋಪಿ ಕೇರಳ ಮೂಲದ ಆರವ್‌ ಅನಾಯ್‌ (21) ಎಂದು ತಿಳಿದು ಬಂದಿದೆ. 

ವರ್ಷದ ಹಿಂದೆ ಬೆಂಗಳೂರಿಗೆ ಬಂದಿರುವ ಮಾಯಾ ಗೋಗೋಯಿ ಎಚ್‌ಎಸ್‌ಆರ್‌ ಲೇಔಟ್‌ನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲೇ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈಕೆಗೆ ಕೇರಳದ ಕಣ್ಣೂರು ಮೂಲದ ಆರವ್‌ ಅನಾಯ್‌ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದು, ನಂತರದಲ್ಲಿ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.    

ಆರೋಪಿ ಪ್ರಿಯಕರನು ಮಾಯಾ ಗೋಗೋಯಿ ಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದು, ಆಕೆಯನ್ನು ನ. 23ರಂದು ಇಂದಿರಾನಗರದ 2ನೇ ಹಂತದಲ್ಲಿರುವ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಕರೆದೊಯ್ದಿದ್ದಾನೆ. ಎರಡು ದಿನಗಳ ಕಾಲ ಫ್ಲ್ಯಾಟ್ ನಲ್ಲಿ ತಂಗಿದ್ದ ಆರವ್ ನ. 26ರಂದು (ಮಂಗಳವಾರ) ಬೆಳಗ್ಗೆ 8.20ರ ಸುಮಾರಿಗೆ ಒಬ್ಬನೇ ಕೋಣೆಯಿಂದ ಹೊರಬಂದು, ಕ್ಯಾಬ್‌ ಬುಕ್‌ ಮಾಡಿಕೊಂಡು ಪರಾರಿಯಾಗಿದ್ದಾನೆ. ಇನ್ನು ಮಧ್ಯಾಹ್ನವಾದರೂ ಕೊಠಡಿಯಿಂದ  ಮಾಯಾ ಹೊರ ಬರದೇ ಇದ್ದರಿಂದ ಅನುಮಾನಗೊಂಡ ಅಪಾರ್ಟ್‌ಮೆಂಟ್‌ ಕೆಲಸಗಾರರು ರೂಂ ಅನ್ನು ಪರೀಕ್ಷಿಸಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಆರವ್ 2 ದಿನಗಳ ಹಿಂದೆಯೇ ಮಾಯಾಳನ್ನು ಹತ್ಯೆಗೈದಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಮೃತದೇಹದ ಬಳಿ ಸಿಗರೆಟ್‌ ತುಂಡುಗಳು, ಹಳೇಯ ಚಾಕು ಪತ್ತೆಯಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!