Saturday, October 17, 2026
Homeಕರಾವಳಿಮಂಗಳೂರುಬಂಟ್ವಾಳ : ಟೆಂಪೋಗೆ ಅನಿಲ ಸಾಗಾಟದ ಟ್ಯಾಂಕರ್ ಡಿಕ್ಕಿ

ಬಂಟ್ವಾಳ : ಟೆಂಪೋಗೆ ಅನಿಲ ಸಾಗಾಟದ ಟ್ಯಾಂಕರ್ ಡಿಕ್ಕಿ

- Advertisement -
- Advertisement -

ಬಂಟ್ವಾಳ : ಟೆಂಪೋಗೆ ಅನಿಲ ಸಾಗಾಟದ ಟ್ಯಾಂಕರ್ ಡಿಕ್ಕಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ.

ಕಲ್ಲಡ್ಕ ಫ್ಲೈ ಓವರ್‌ನಲ್ಲಿ ಅತಿವೇಗದಿಂದ ಬಂದ ಟೆಂಪೋ ವಾಹನ ಸಮುದ್ರ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಚಾಲಕನ ಕೈ ವಾಹನಗಳ ನಡುವೆ ಸಿಲುಕಿಕೊಂಡಿದೆ.

ಗ್ಯಾಸ್ ಟ್ಯಾಂಕರ್‌ಗೆ ವಾಹನ ಡಿಕ್ಕಿಯಾಗಿದ್ದರಿಂದ, ಅನಿಲ ಸೋರಿಕೆಯ ಭಯದಿಂದ ಯಾರೂ ವಾಹನಗಳ ಮೇಲೆ ಒತ್ತಡ ಹಾಕಿಲ್ಲ. ಸುದ್ದಿ ತಿಳಿದ ಪೊಲೀಸ್ 112 ವಾಹನದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯರ ನೆರವಿನೊಂದಿಗೆ ಚಾಲಕನನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಗೆ ನೆರವಾಗಿದ್ದಾರೆ.

- Advertisement -

Latest News

error: Content is protected !!