Sunday, June 7, 2026
Homeತಾಜಾ ಸುದ್ದಿಬಿಸಿರೋಡಿನ ಕಟ್ಟಡವೊಂದರಿಂದ ಬಿತ್ತು ಕಂತೆ ಕಂತೆ ಹಣ; ನೋಟುಗಳನ್ನು ಸಂಗ್ರಹಿಸಲು ಮುಗಿಬಿದ್ದ ಜನ

ಬಿಸಿರೋಡಿನ ಕಟ್ಟಡವೊಂದರಿಂದ ಬಿತ್ತು ಕಂತೆ ಕಂತೆ ಹಣ; ನೋಟುಗಳನ್ನು ಸಂಗ್ರಹಿಸಲು ಮುಗಿಬಿದ್ದ ಜನ

- Advertisement -
- Advertisement -

ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿ. ಮೂಡಾ ಗ್ರಾಮದ ಬಿ. ಸಿ ರೋಡ್ ನ ಶರವು ರಿಕ್ರೀಯೆಷನ್ ಕ್ಲಬ್ ಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ಜೂಜಾಟ ಆಡುತ್ತಿದ್ದ 28 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಈ ಕಾಯಾಚರಣೆಯನ್ನು ನಡೆಸಿದ ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ಹಾಗೂ ಸಿಬ್ಬಂದಿಗಳು ಆರೋಪಿಗಳಿಂದ ಅಕ್ರಮ ಜೂಜಾಟಕ್ಕೆ ಬಳಸಿದ 26900/- ರೂ ಹಣವನ್ನು ಹಾಗೂ ಒಂದು ಟೇಬಲ್, ಆರು ಚೇರ್, 52 ಇಸ್ಪಿಟ್ ಹಾಳೆಗಳನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಾರ್ಯಾಚರಣೆ ವೇಳೆ ಪೊಲೀಸರಿಗೆ ಹೆದರಿದ ಆರೋಪಿಗಳು ಕಟ್ಟಡದ ಮೇಲ್ಭಾಗದಿಂದಲೇ ಆಟಕ್ಕೆ ಬಳಸಿದ ಹಣವನ್ನು ಕೆಳಗೆ ಬಿಸಾಕಿದ್ದಾರೆ. ಒಮ್ಮಿಂದೊಮ್ಮೆಲೆ ಬಿದ್ದ ನೋಟುಗಳನ್ನು ಹೆಕ್ಕಲು ಕೆಲವರು ಮುಂದಾದ ಹಿನ್ನೆಲೆಯಿಂದ ಸರ್ವೀಸ್ ರಸ್ತೆಯಲ್ಲಿ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.

- Advertisement -

Latest News

error: Content is protected !!