Friday, June 27, 2025
Homeಕರಾವಳಿಮಂಗಳೂರುಬಂಟ್ವಾಳ; ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ; ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

spot_img
- Advertisement -
- Advertisement -

ಬಂಟ್ವಾಳ; ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಪೊಳಲಿ ದೇವಸ್ಥಾನ ವಠಾರದಲ್ಲಿ ನಡೆದಿದೆ.

ಅಮ್ಮಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ಗೀತಾ (63) ಮೇ 18 ರಂದು ಮಗನ ಮದುವೆ ಇರುವ ಪ್ರಯುಕ್ತ ಶನಿವಾರ 3,99,500/-ರೂಪಾಯಿ ಮೌಲ್ಯದ 41.800 ಗ್ರಾಂ ತೂಕದ ಪದಕ ಇರುವ ಕರಿಮಣಿ ಸರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 9.820 ಗ್ರಾಂ ತೂಕದ ಚಿನ್ನದ ಬಳೆ ಖರೀದಿಸಿ ಸಂಪ್ರದಾಯದಂತೆ ದೇವರಲ್ಲಿ ಚಿನ್ನ ಇಟ್ಟು ಪೂಜಿಸುವ ಸಲುವಾಗಿ ತನ್ನ ಮಗನೊಂದಿಗೆ ಬೆಳಗ್ಗೆ 11.45 ಗಂಟೆಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ತನ್ನ ಬ್ಯಾಗ್ ನಲ್ಲಿರಿಸಿದ್ದರು. ಆ ಬಳಿಕ ದೇವರ ಪೂಜೆಯಲ್ಲಿ ಪಾಲ್ಗೊಂಡು ಬ್ಯಾಗನ್ನು ಗಮನಿಸಿದಾಗ ಬ್ಯಾಗಿಗೆ ಹಾಕಿದ್ದ ಜಿಪ್ ಸ್ವಲ್ಪ ತೆಗೆದಿರುವುದು ಗಮನಕ್ಕೆ ಬಂದಿದೆ. ಇದರಿಂದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಾಣೆಯಾಗಿರುತ್ತದೆ. ಈ ಬಗ್ಗೆ ಪರಿಸರದಲ್ಲಿ ಹುಡುಕಾಡಿದ್ದು, ಚಿನ್ನಾಭರಣ ಪತ್ತೆಯಾಗದೇ ಇದ್ದಾಗ, ನಂತರ ವಿಚಾರವನ್ನು ದೇವಸ್ಥಾನದ ಕಛೇರಿಯಲ್ಲಿ ತಿಳಿಸಿದ್ದು. ದೇವಸ್ಥಾನದವರೂ ಹಾಗೂ ಇತರ ಭಕ್ತಾದಿಗಳು ಹುಡುಕಾಟ ನಡೆಸಿದ್ರೂ ಪತ್ತೆಯಾಗಿಲ್ಲ.

 ಕಳವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 4,99,500/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!