ಬಂಟ್ವಾಳ : ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಅಬ್ಯಾಂತ್ ಎಂಬಲ್ಲಿನ ಮನೆಯೊಂದರಲ್ಲಿ ಜನರು ಗುಂಪು ಸೇರಿ ವಾಮಾಚಾರ ದ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಪಡೆಯಲು ಮನೆಗೆ ಹೋದ ಆಶಾಕಾರ್ಯಕರ್ತೆಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಓಡಿಸಿದ ಘಟನೆ ನಡೆದಿದೆ.
ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಬ್ಯಾಂತ್ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ ಜನ ಸೇರುತ್ತಿದ್ದಾರೆ ಎಂಬ ದೂರು ಆಶಾ ಕಾರ್ಯಕರ್ತೆಯರಿಗೆ ಬರುತ್ತಿತ್ತು. ಇಂದು ಕೂಡ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆ ಮನೆಗೆ ಭೇಟಿ ನೀಡಿದ ಮಾಹಿತಿ ಪಡೆಯುತ್ತಿದ್ದಂತೆ ಮನೆಯ ಮಾಲಕಿ ಪೊರಕೆ ಹಿಡಿದು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಜೊತೆಗೆ ಬಂದಿದ್ದ ಸ್ಥಳೀಯ ಗ್ರಾ.ಪಂ.ಸದಸ್ಯರುಗಳಿಗೂ ನಿಂದನೆ ಮಾಡಿ ಅವ್ಯಾಚ್ಚ ಶಬ್ದಗಳಿಂದ ಬೈದು ಕಳುಹಿಸಿದ್ದಾರೆ.
ಈ ಮನೆಯಲ್ಲಿ ವಾಮಾಚಾರದ ಕಾರ್ಯಗಳು ದಿನ ನಡೆಯುತ್ತಿರುತ್ತವೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಈ ಬಗ್ಗೆ ಆಶಾಕಾರ್ಯಕರ್ತೆಯರು ಹಾಗೂ ಸ್ಥಳೀಯ ಗ್ರಾ.ಪಂ.ಸದಸ್ಯರ ದೂರಿನಂತೆ ಪುಂಜಾಲಕಟ್ಟೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆಯ ಬಳಿಕ ಈ ಘಟನೆಯ ಸತ್ಯಾಸತ್ಯತೆ ತಿಳಿಯಬೇಕಾಗಿದೆ.