Thursday, June 4, 2026
Homeಕರಾವಳಿಬಂಟ್ವಾಳ; ಕನ್ಯಾನದಲ್ಲಿ 2 ಕೋಟಿ 28ಲಕ್ಷ ರೂ.ಗಳ ಕಾಮಗಾರಿಯನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ; ಕನ್ಯಾನದಲ್ಲಿ 2 ಕೋಟಿ 28ಲಕ್ಷ ರೂ.ಗಳ ಕಾಮಗಾರಿಯನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ; ಕನ್ಯಾನ ಗ್ರಾಮದ 2ಕೋಟಿ 28ಲಕ್ಷ ರೂ.ಗಳ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿ ಇವರು ಉದ್ಘಾಟಿಸಿದರು. 

ಬದಿಕೋಡಿ-ಶಿರಂಕಲ್ಲು ಎಂಬಲ್ಲಿ 1.40 ಕೋಟಿ ರೂ.ಗಳ ಕಿಂಡಿ ಅಣೆಕಟ್ಟು, ಬನಾರಿ ಗೋಪಾಲಕೃಷ್ಣ ದೇವಸ್ಥಾನ ರಸ್ತೆಗೆ 25ಲಕ್ಷ,  ಮಾಡದಾರು-ಅಶ್ವತ್ಥಕೋಡಿ ರಸ್ತೆಗೆ 25ಲಕ್ಷ, ಮುದ್ಕುಂಜ ರಸ್ತೆಗೆ 10ಲಕ್ಷ, ಪನೆಯಡ್ಕ ರಸ್ತೆಗೆ 10 ಲಕ್ಷ, ಕಾಣಿಚ್ಚಾರು ಧೂಮಾವತಿ ದೈವಸ್ಥಾನದ ರಸ್ತೆಗೆ 10ಲಕ್ಷ, ಬಾಲ್ತ್ರೋಡಿ ರಸ್ತೆಗೆ 10ಲಕ್ಷ, ಪರಕ್ಕಜೆ ರಸ್ತೆಗೆ 10ಲಕ್ಷ, ಹಾಗೂ ಶ್ರೀ ಸರಸ್ವತಿ ವಿದ್ಯಾಲಯದ ರಸ್ತೆಗೆ 3.5ಲಕ್ಷ ರೂ.ಗಳ ಕಾಮಗಾರಿಗಳನ್ನು ಉದ್ಘಾಟಿಸಿದರು. ಅದರೊಂದಿಗೆ ಕನ್ಯಾನ ಗ್ರಾಮದ ಬಿ.ಜೆ.ಪಿ. ಬೂತ್ ಸಮಿತಿಯ ಅಧ್ಯಕ್ಷರುಗಳ ಮನೆಗೆ ಭೇಟಿ ನೀಡಿ ನಾಮಫಲಕಗಳನ್ನು ಅಳವಡಿಸಿ ಕಾರ್ಯಕರ್ತರನ್ನು ಗೌರವಿಸಲಾಯಿತು.

ಈ ಸಮಯದಲ್ಲಿ ಕನ್ಯಾನ ಶಕ್ತಿ ಕೇಂದ್ರದ ಪ್ರಭಾರಿಗಳಾದ ನಂದರಾಮ ರೈ,  ಕೊಳ್ನಾಡು ಮಹಾಶಕ್ತಿ ಕೇಂದ್ರದ ಅದ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು,  ಕನ್ಯಾನ ಶಕ್ತಿಕೇಂದ್ರದ ಪ್ರಮುಖ್ ರಾದ ಉದಯರಮಣ ಭಟ್, ಸಹಪ್ರಮುಖ್ ಕುಮಾರ್ ಭಟ್ ಬದಿಕೋಡಿ, ಬಿ.ಜೆ.ಪಿ.ಯ ಹಿರಿಯ ನಾಯಕರಾದ ಕೆ.ಪಿ. ರಘುರಾಮ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ. ಲಿಂಗಪ್ಪ ಗೌಡ, ಪಂಚಾಯತ್ ಉಪಾಧ್ಯಕ್ಷರಾದ ಕುಸುಮ, ಪಂಚಾಯತ್ ಸದಸ್ಯರಾದ ಮನೋಜ್ ಬನಾರಿ, ಶ್ರೀಮತಿ ವನಿತ,ಕೊಳ್ನಾಡು ಮಹಾಶಕ್ತಿ ಕೇಂದ್ರದ ಸದಸ್ಯರಾದ ಧರ್ಣಮ್ಮ ಜೆ.ಪಿ.ಗೌಡ, ಕೃಷ್ಣ ಬನಾರಿ.ಹಾಗೂ ಕನ್ಯಾನ ಬಿ.ಜೆ.ಪಿ. ಬೂತ್ ಸಮಿತಿಯ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!