Thursday, May 2, 2024
Homeತಾಜಾ ಸುದ್ದಿಕೊರೊನಾ ಹಾಟ್ ಸ್ಪಾಟ್ ಆದ ಬೆಂಗಳೂರು: ಪ್ರತಿ ನಿಮಿಷಕ್ಕೆ 8ರಿಂದ 9 ಮಂದಿಗೆ ಸೋಂಕು...

ಕೊರೊನಾ ಹಾಟ್ ಸ್ಪಾಟ್ ಆದ ಬೆಂಗಳೂರು: ಪ್ರತಿ ನಿಮಿಷಕ್ಕೆ 8ರಿಂದ 9 ಮಂದಿಗೆ ಸೋಂಕು : ಗಂಟೆಗೆ ಒಬ್ಬರು ಮಹಾಮಾರಿಗೆ ಬಲಿ

spot_img
- Advertisement -
- Advertisement -

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಹೊಸದಾಗಿ 12,793 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಪ್ರತಿ ನಿಮಿಷದ ಲೆಕ್ಕಾಚಾರದಲ್ಲಿ ಹರಡುತ್ತಿವೆ ಎಂಬ ಶಾಂಕಿನ್ ಮಾಹಿತಿ ಹೊರ ಬಿದ್ದಿದೆ. ಏಪ್ರಿಲ್ 17, 2021ರ ಕೊರೋನಾ ಹೆಲ್ತ್ ಬುಲೆಟಿನ್ ಗಮನಿಸಿದ್ರೇ.. ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 8 ರಿಂದ 9 ಜನರಿಗೆ ಕೊರೋನಾ ಸೋಂಕು ತಗುಲುತ್ತಿರುವುದಾಗಿ ತಿಳಿದು ಬಂದಿದೆ.

ಅಂದಹಾಗೇ ಏಪ್ರಿಲ್ 15, 2021ರಂದು ರಾಜ್ಯಾಧ್ಯಂತ 14,738 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇವರಲ್ಲಿ ಬೆಂಗಳೂರು ನಗರದಲ್ಲಿ 10,497 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿತ್ತು. ಈ ಮಾಹಿತಿ ಅನುಸಾರ ಪ್ರತಿ ನಿಮಿಷಕ್ಕೆ 8 ಜನರಿಗೆ ಕೊರೋನಾ ತಗುಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!