- Advertisement -
- Advertisement -
ಬೆಂಗಳೂರು: ತುಳು ಭಾಷೆಯನ್ನು ಹೆಚ್ಚುವರಿ ರಾಜ್ಯ ಭಾಷೆಯಾಗಿ ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಂಬಳ ಉದ್ಘಾಟನೆ ವೇಳೆ ಸಿಎಂಗೆ ಕಂಬಳ ಸಮಿತಿ ಮನವಿ ಪತ್ರ ಸಲ್ಲಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ತುಳು ಭಾಷೆಯಲ್ಲಿಯೇ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆ ಮಾಡಬೇಕು ಎಂದು ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದರು. ಪ್ರತಿ ವರ್ಷವೂ ಬೆಂಗಳೂರು ಕಂಬಳ ನಡೆಯುವಂತಾಗಲಿ ಎಂದು ಭಾಷಣದ ವೇಳೆ ಸ್ಪೀಕರ್ ಖಾದರ್ ಆಶಿಸಿದರು.
- Advertisement -