Friday, June 5, 2026
Homeಕರಾವಳಿಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ ಕಾಣಿಕೆ ಡಬ್ಬಿಗಳು ಪತ್ತೆ: ಲಾಯಿಲದ ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಪತ್ತೆ

ಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ ಕಾಣಿಕೆ ಡಬ್ಬಿಗಳು ಪತ್ತೆ: ಲಾಯಿಲದ ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಪತ್ತೆ

- Advertisement -
- Advertisement -

ಬೆಳ್ತಂಗಡಿ:  ಎರಡು  ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ  ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲದಿಂದ ಮುಂಡೂರು ಸಂಪರ್ಕಿಸುವ ಸೋಮಾವತಿ ನದಿಗೆ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ (ಇಂದು) ಜೂ 10 ರಂದು  ಮಧ್ಯಾಹ್ನ  ಸ್ಥಳೀಯ ನಿವಾಸಿ ರಾಜು ಅವರು  ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್ ಡಬ್ಬಗಳು ಪತ್ತೆಯಾಗಿವೆ. ಈ ಬಗ್ಗೆ ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ಗಮನಕ್ಕೆ ತಂದಾಗ ಅವರು ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಯಾರೋ ಕಳ್ಳರು ಕಳೆದ ರಾತ್ರಿ ಎಲ್ಲಿಂದಲೂ ಕಳ್ಳತನ ಎಸಗಿ ಗೋಣಿಗಳಲ್ಲಿ ತುಂಬಿಸಿಕೊಂಡು ಬಂದು ಸೇತುವೆ ಅಡಿಯಲ್ಲಿ ಇದನ್ನು ಒಡೆದು ಹಣ ಕಳವು ಗೈದಿರುವ ಶಂಕೆ ಮೂಡಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ , ಕ್ರೈಂ ಪಿಸಿಗಳಾದ ಚರಣ್ ರಾಜ್ , ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಡಬ್ಬದೊಳಗೆ ಬೀಗ ಮತ್ತು ಕೀ ಪತ್ತೆಯಾಗಿದ್ದು . ತನಿಖೆಗಾಗಿ ಎರಡು ಕಾಣಿಕೆ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಣಿಕೆ ಡಬ್ಬಿಗಳು ಎಲ್ಲಿಂದ ಕಳ್ಳತನವಾಗಿದೆ. ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

- Advertisement -

Latest News

error: Content is protected !!