- Advertisement -
![]()
- Advertisement -
ಬೆಳ್ತಂಗಡಿ : ಪೋಕ್ಸೋ ಪ್ರಕರಣ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧ ಸಂಖ್ಯೆ 91/2025ರಂತೆ ಆರೋಪಿ ಅಮ್ಜದ್ ಖಾನ್ (18) ಎಂಬವರ ವಿರುದ್ಧ ನ.25ರಂದು ಪೋಕ್ಸೋ ಕಾಯ್ದೆ ಕಲಂ 4ಮತ್ತು 6ಅಡಿಯಲ್ಲಿ ಪ್ರಕರಣ ದಾಖಲಿಸಿ ನ.27ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪ್ರಕರಣದಲ್ಲಿ ಡಿ.15ರಂದು ಆರೋಪಿಯ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದು. ಆರೋಪಿಯ ಜಾಮೀನು ಅರ್ಜಿಯನ್ನು ಪರಿಶೀಲಿಸಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ ಡಿ.24ರಂದು ಜಾಮೀನು ಮಂಜೂರು ಮಾಡಿರುತ್ತದೆ.
ಆರೋಪಿ ಪರವಾಗಿ ವಕೀಲರಾದ ಉಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಎ ಜೋಗಿಬೆಟ್ಟು ವಾದಿಸಿದರು
- Advertisement -


