Friday, June 5, 2026
Homeತಾಜಾ ಸುದ್ದಿಎಲ್ಲಾ ಆಟೋ, ಕ್ಯಾಬ್ ಚಾಲಕ-ಮಾಲಕರ ಗಮನಕ್ಕೆ..

ಎಲ್ಲಾ ಆಟೋ, ಕ್ಯಾಬ್ ಚಾಲಕ-ಮಾಲಕರ ಗಮನಕ್ಕೆ..

- Advertisement -
- Advertisement -

ಬೆಂಗಳೂರು: ಈ ಹಿಂದೆ ಲಘು ಮೋಟಾರು ವಾಹನಗಳ ಡಿಎಲ್ ಪಡೆದವರು ಆಟೋ, ಕ್ಯಾಬ್ ವಾಹನವನ್ನೂ ಚಲಾಯಿಸಬಹುದು ಎಂದು ಕರ್ನಾಟಕ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ನೀಡಲಾಗಿತ್ತು ಮತ್ತು ಆಟೋರಿಕ್ಷಾ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ನಿಯಮವನ್ನು ತೆಗೆಯಲಾಗಿತ್ತು. ಆದರೆ ಇದೀಗ ಆಟೋ, ಕ್ಯಾಬ್ ವಾಹನಗಳ ಚಾಲಕರಿಗೆ ರಾಜ್ಯ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಇಂದಿನಿಂದಲೇ(ಅ.13) ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಲಾಗಿದ್ದು, ರಾಜ್ಯದ ಎಲ್ಲ ಆರ್ ಟಿಒ ಅಧಿಕಾರಿಗಳಿಗೂ ಅಧಿಸೂಚನೆ ಹೊರಡಿಸಲಾಗಿದ್ದು, ಬ್ಯಾಡ್ಜ್ ಇಲ್ಲದವರು, ಅವಧಿ ಮುಕ್ತಾಯಗೊಂಡಿರುವವರು ಬ್ಯಾಡ್ಜ್ ಪಡೆಯಬೇಕಾಗುತ್ತದೆ. ಬಾಡ್ಜ್ ಸಂಖ್ಯೆ ಪಡೆಯಲು ತಂತ್ರಾಂಶದಲ್ಲಿ ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ ಎಂದು ಸಾರಿಗೆ ಇಲಾಖೆ ಆಯುಕ್ತರು ಹೇಳಿದ್ದಾರೆ.

- Advertisement -

Latest News

error: Content is protected !!