Thursday, July 16, 2026
Homeಕರಾವಳಿಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಆಂತರಿಕ ವಿಮಾನಯಾನ ಸಾಮಾನ್ಯ ಸ್ಥಿತಿಗೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಆಂತರಿಕ ವಿಮಾನಯಾನ ಸಾಮಾನ್ಯ ಸ್ಥಿತಿಗೆ

- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಂತರಿಕ ವಿಮಾನಯಾನಗಳ ಸೇವೆಯೂ ಶೀಘ್ರ ಸಾಮಾನ್ಯ ಸ್ಥಿತಿಗೆ ಮರಳಲಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಮಂಗಳೂರು ನಿಲ್ದಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮಾನಗಳ ಸಂಚಾರ ಆರಂಭಿಸಲು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮಾ. 27ರಿಂದ ಈ ಹಿಂದಿನಂತೆ ಸೇವೆ ಆರಂಭವಾಗಲಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ, ಸ್ಪೈಸ್‌ಜೆಟ್‌, ಏರ್‌ಇಂಡಿಯಾ, ಗೋಫಸ್ಟ್‌ ವಿಮಾನಯಾನ ಸಂಸ್ಥೆಗಳ ವಿಮಾನಗಳು ಪ್ರಸ್ತುತ ಮಂಗಳೂರಿನಿಂದ ಬೆಂಗಳೂರು, ಮುಂಬಯಿ, ಹೈದರಾಬಾದ್‌, ಚೆನ್ನೈ ಹಾಗೂ ಕೊಯಮತ್ತೂರಿಗೆ ಸಂಚರಿಸುತ್ತಿವೆ. ಇಂಡಿಗೋ ಸಂಸ್ಥೆಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಬೆಂಗಳೂರು, ಮುಂಬಯಿ, ಹೈದರಾಬಾದ್‌ ಹಾಗೂ ಚೆನ್ನೈಗೆ ವಾರಕ್ಕೆ 57 ಹಾರಾಟ ನಡೆಸುತ್ತಿವೆ.

ಸ್ಪೈಸ್‌ಜೆಟ್‌ ಬೆಂಗಳೂರು ಮತ್ತು ಹೈದರಾಬಾದ್‌ಗೆ ತಲಾ 4, ಏರ್‌ಇಂಡಿಯಾ ಕೊಯಮತ್ತೂರಿಗೆ 7 ಗೋಫಸ್ಟ್‌ ಮುಂಬಯಿಗೆ 6 ಸಂಚಾರಗಳನ್ನು ನಡೆಸುತ್ತಿವೆ.

ಪ್ರಸ್ತುತ ಉದ್ದೇಶಿತ ಹೊಸ ಸಂಚಾರ ಶೆಡ್ಯೂಲ್ ನಂತೆ ಇಂಡಿಗೋ 77, ಸ್ಪೈಸ್‌ಜೆಟ್‌ 14, ಗೋಫಸ್ಟ್‌ 14ಕ್ಕೇರಲಿದೆ. ಏರ್‌ ಇಂಡಿಯಾದ ಯಾನ ಈ ಹಿಂದಿನಂತೆ ಇರಲಿದೆ.

ಇದರ ಜತೆ ಇಂಡಿಗೋ ಹೊಸದಾಗಿ ಪುಣೆಗೆ ವಾರಕ್ಕೆ 5 ಯಾನಗಳನ್ನು ನಡೆಸುವ ಪ್ರಸ್ತಾವನೆ ಸಲ್ಲಿಸಿದೆ. ಸ್ಪೈಸ್‌ಜೆಟ್‌ ಕೂಡ ಹೊಸದಿಲ್ಲಿಗೆ ದಿನನಿತ್ಯ ವಿಮಾನಯಾನ ಆರಂಭಿಸುವ ಪ್ರಸ್ತಾವ ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಫೆಬ್ರವರಿಯಲ್ಲಿ 1,03,273 ಪ್ರಯಾಣಿಕರು ಸಂಚರಿಸಿದ್ದಾರೆ.

- Advertisement -

Latest News

error: Content is protected !!