Wednesday, June 24, 2026
Homeತಾಜಾ ಸುದ್ದಿಮಗುವಿನ ಜೀವ ತೆಗೆದ ನಳ್ಳಿ ನೀರು: 10 ವರ್ಷಗಳ ಬಳಿಕ ಜನಿಸಿದ ಮಗು ಸಾವು

ಮಗುವಿನ ಜೀವ ತೆಗೆದ ನಳ್ಳಿ ನೀರು: 10 ವರ್ಷಗಳ ಬಳಿಕ ಜನಿಸಿದ ಮಗು ಸಾವು

- Advertisement -
- Advertisement -

ಭೋಪಾಲ್: ನಲ್ಲಿ ನೀರನ್ನ ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದು, ಇದೀಗ ಅದೇ ನೀರು ಮಗುವಿನ ಜೀವವನ್ನೇ ತೆಗೆದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.

ಐದೂವರೆ ತಿಂಗಳ ಅಯಾನ್ ಎಂಬ ಮಗು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದೆ.

ಅವ್ಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಗಳ ಪ್ರಾರ್ಥನೆ ಮತ್ತು ಕಾಯುವಿಕೆಯ ನಂತರ ಅವರಿಗೆ ಜುಲೈನಲ್ಲಿ ಮಗು ಜನಿಸಿತ್ತು.10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು ಕಸಿದಿದ್ದಾನೆ ಎಂದು ಇಂದೋರ್‌ನ ಮನೆಯ ಮೂಲೆಯೊಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರು ನೋವಿನಿಂದ ಹೇಳುತ್ತಿದ್ದರು.

ನೋವು ತೋಡಿಕೊಂಡ ವೃದ್ಧೆಯ ಮಗನಿಗೆ ಮದುವೆಯಾಗಿ 10 ವರ್ಷಗಳ ಕಾಲ ಮಕ್ಕಳಿರಲಿಲ್ಲ. ಇತ್ತೀಚೆಗೆ ಅವರ ಸೊಸೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೆ ಅವ್ಯಾನ್ ಎಂದು ಹೆಸರಿಟ್ಟಿದ್ದರು. ತಾಯಿಯಿಂದ ಎದೆಹಾಲು ಬರದ ಕಾರಣ ಪ್ಯಾಕೇಟ್ ಹಾಲನ್ನು ಕೊಡಲು ವೈದ್ಯರು ಸಲಹೆ ನೀಡಿದ್ದರು. ಅದರಂತೆ, ಗಟ್ಟಿ ಹಾಲಿಗೆ ತಾವು ಸದಾ ಬಳಸುತ್ತಿದ್ದ ನಲ್ಲಿ ನೀರನ್ನೇ ಬೆರೆಸಿ ಮಗುವಿಗೆ ನೀಡಿದ್ದರು. ದುರಾದೃಷ್ಟವಶಾತ್, ಕಲುಷಿತಗೊಂಡಿದ್ದ ನೀರು ವಿಷವಾಗಿ ಪರಿಣಮಿಸಿದ್ದು, ಮಗು ಮೃತಪಟ್ಟಿದೆ.

- Advertisement -

Latest News

error: Content is protected !!