Monday, June 29, 2026
Homeತಾಜಾ ಸುದ್ದಿಶಾಲಾ ಬಸ್ಸಿನೊಳಗೆ ನಿದ್ದೆ ಜಾರಿದ ಕಂದಮ್ಮ : ಬಸ್ ನಲ್ಲೇ ಬಾಕಿಯಾಗಿ ಉಸಿರುಗಟ್ಟಿ ಸಾವು

ಶಾಲಾ ಬಸ್ಸಿನೊಳಗೆ ನಿದ್ದೆ ಜಾರಿದ ಕಂದಮ್ಮ : ಬಸ್ ನಲ್ಲೇ ಬಾಕಿಯಾಗಿ ಉಸಿರುಗಟ್ಟಿ ಸಾವು

- Advertisement -
- Advertisement -

ಕತಾರ್:ಶಾಲಾ ಬಸ್ಸಿನೊಳಗೆ ನಿದ್ರೆ ಮಾಡುತ್ತಿದ್ದ ಪುಟ್ಟ ಕಂದಮ್ಮ ಬಸ್ ನೊಳಗೆ ಬಾಕಿಯಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕತಾರ್ ನಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ಕಿರಿಯ ಪುತ್ರಿ ಮಿನ್ಝಾ ಮರಿಯಂ ಮೃತ ಮಗು.

ಕತಾರಿನ ಅಲ್ವಾಕ್ರಾ ಪ್ರದೇಶದ ಸ್ಪ್ರಿಂಗ್ಫೀಲ್ಡ್ ಕಿಂಡರ್ಗಾರ್ಡನ್ ನಲ್ಲಿ  ಓದುತ್ತಿದ್ದ ಮಿನ್ಝಾ ಮರಿಯಂ ಎಂದಿನಂತೆ ಶಾಲಾ ಬಸ್ ನಲ್ಲಿ ಶಾಲೆಗೆ ತೆರಳಿದ್ದು,  ಬಸ್ಸಿನಲ್ಲೇ ನಿದ್ರೆಗೆ ಜಾರಿದ್ದಳು. ಬಸ್ ಸಿಬ್ಬಂದಿಯು ಇತರ ಮಕ್ಕಳನ್ನು ಬಸ್ಸಿನಿಂದ ಇಳಿಸಿ ಶಾಲೆಗೆ ಕರೆದೊಯ್ದಿದ್ದಾರೆ. ಆದರೆ ಬಸ್ಸಿನ ಸೀಟಿನಲ್ಲಿ ಮಲಗಿದ್ದ ಮಿನ್ಸಾಳನ್ನು  ಗಮನಿಸಲಿಲ್ಲ. ಮಕ್ಕಳನ್ನು ಇಳಿಸಿದ ನಂತರ ನೌಕರರು ಬಸ್ಸಿಗೆ ಬೀಗ ಹಾಕಿ ತೆರಳಿದ್ದಾರೆ.

ಬಸ್ ನಲ್ಲಿ ಬಾಕಿಯಾದ ಮಗು  ತೀವ್ರ ತಾಪಮಾನದ ಹಿನ್ನೆಲೆ ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಸಿಬ್ಬಂದಿ ಮಧ್ಯಾಹ್ನ ಮಕ್ಕಳನ್ನು ಕರೆದೊಯ್ಯಲು ಬಸ್ ಹತ್ತಲು ಬಂದಾಗ, ಬಸ್ಸಿನೊಳಗೆ ಮಗು ಬಿದ್ದಿರುವುದು ಗಮನಿಸಿದ್ದಾರೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಈ ವೇಳೆ ಮಗು ಮೃತಪಟ್ಟಿದೆ .ಮಗುವಿನ ಸಾವಿಗೆ ಶಾಲಾ ಸಿಬ್ಬಂದಿ ಹೊಣೆ ಎಂದು ದೂರಲಾಗಿದೆ. ಈ ಕುರಿತು ಅಲ್ಲಿನ ಸರಕಾರ ತನಿಖೆಗೆ ಆದೇಶಿಸಿದೆ.

- Advertisement -

Latest News

error: Content is protected !!