Wednesday, June 3, 2026
Homeಕರಾವಳಿಉಡುಪಿಉಡುಪಿ : ಮನೆಯಿಂದ ಹೊರ ಹೋಗಿದ್ದ  ಮಹಿಳೆ ಮಗುವಿನೊಂದಿಗೆ ನಾಪತ್ತೆ

ಉಡುಪಿ : ಮನೆಯಿಂದ ಹೊರ ಹೋಗಿದ್ದ  ಮಹಿಳೆ ಮಗುವಿನೊಂದಿಗೆ ನಾಪತ್ತೆ

- Advertisement -
- Advertisement -

ಉಡುಪಿ : ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ಉಡುಪಿಯ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್‌ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ನಾಪತ್ತೆಯಾಗಿದ್ದಾರೆ.

ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್‌ ಅವರ ಅಕ್ಕ ಸಿಮ್ರಾನ್‌ ಅವರ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪತಿ ಶಕೀಲ್‌ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!