- Advertisement -
- Advertisement -
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಲಿಸಲು ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಆಪತ್ಭಾಂಧವ ಬಾಬಾ ಜಲೀಲ್ ಇವರು 11 ಇಂಚು ಕೇಶ ದಾನ ಮಾಡಿದ್ದಾರೆ.
ಬೆಳ್ತಂಗಡಿ ನಗರದ ಕುತ್ಯಾರ್ ದೇವಸ್ಥಾನದ ಬಳಿಯ ಬಿ.ಇಬ್ರಾಹಿಂ ಮತ್ತು ಅತೀಕಾ ದಂಪತಿಗಳ ಪುತ್ರ ಆಪದ್ಭಾಂಧವ ಬಾಬಾ ಜಲೀಲ್(40) ಇವರು ತನ್ನ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್ ಪೀಡಿತರಿಗೆ 11 ಇಂಚು ಕೂದಲನ್ನು ದಾನ ಮಾಡಿದ್ದಾರೆ.
ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಶೃಂಗಾರ್ ಮಾಸ್ಟರ್ ಕಟ್ಸ್ ನಲ್ಲಿ ಸೆ.9 ರಂದು 11 ಇಂಚು ಕೂದಲನ್ನು ಕ್ಯಾನ್ಸರ್ ಪೀಡತರಿಗೆ ವಿಗ್ ಮಾಡಿಸಲು ಕೇಶ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
- Advertisement -