Saturday, June 6, 2026
Homeಕರಾವಳಿಉಪ್ಪಿನಂಗಡಿ: 50 ಅಡಿ ಆಳಕ್ಕೆ ಬಿದ್ದ ಆಟೋ ರಿಕ್ಷಾ; ಚಾಲಕ ಅಪಾಯದಿಂದ ಪಾರು

ಉಪ್ಪಿನಂಗಡಿ: 50 ಅಡಿ ಆಳಕ್ಕೆ ಬಿದ್ದ ಆಟೋ ರಿಕ್ಷಾ; ಚಾಲಕ ಅಪಾಯದಿಂದ ಪಾರು

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹಳೇಗೇಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 50 ಅಡಿ ಆಳಕ್ಕೆ ಆಟೋ ರಿಕ್ಷಾವೊಂದು ಬಿದ್ದ ಘಟನೆ ನಡೆಯಿತು.

ಚಾಲಕ ಅದೃಷ್ಟವಶಾತ್ ಸಣ್ಣಪುಟ್ಟ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಹಳೇಗೇಟು ಎಂಬಲ್ಲಿ ಹೆದ್ದಾರಿಯಿಂದ ನೇರವಾಗಿ ನದಿ ದಡಕ್ಕೆ ರಿಕ್ಷಾ ಬಿದ್ದಿದ್ದು, ರಿಕ್ಷಾ ನುಜ್ಜುಗುಜ್ಜಾಗಿದೆ.


ನಟ್ಟಿಬೈಲ್ ನಿವಾಸಿ ಚೆಲುವ ಎಂಬವರು ಚಲಾಯಿಸಿಕೊಂಡು ಹೋಗುವಾಗ ಹಠತ್ತಾನೆ ಪಲ್ಟಿ ಆಗಿ ಹೆದ್ದಾರಿ ಅಂಚಿನಿಂದಲೇ ಪಲ್ಟಿ ಹೊಡೆದುಕೊಂಡು ಹೋಗಿ ನದಿ ದಡದಲ್ಲಿ ನಿಂತಿದೆ. ಪಲ್ಟಿ ಆಗಿ ಬಿದ್ದಿರುವ ಜಾಗದಲ್ಲಿ ಕುರುಚಲು ಗಿಡಗಂಟಿ ಇದ್ದುದರಿಂದಾಗಿ ಚಾಲಕ ಚೆಲುವೆ ಸಣ್ಣಪುಟ್ಟ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!