Thursday, June 25, 2026
Homeಕರಾವಳಿಪುತ್ತೂರು:ಫುಲ್ ಟೈಟ್ ಮುಖ್ಯರಸ್ತೆ ಬದಿಯಲ್ಲೇ ಆಟೋ ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕ; ಡ್ರೈವರ್ ನ್ನು ಪೊಲೀಸರಿಗೊಪ್ಪಿಸಿದ...

ಪುತ್ತೂರು:ಫುಲ್ ಟೈಟ್ ಮುಖ್ಯರಸ್ತೆ ಬದಿಯಲ್ಲೇ ಆಟೋ ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕ; ಡ್ರೈವರ್ ನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

- Advertisement -
- Advertisement -

ಪುತ್ತೂರು: ಫುಲ್ ಟೈಟ್ ಮುಖ್ಯರಸ್ತೆ ಬದಿಯಲ್ಲೇ ಆಟೋ ನಿಲ್ಲಿಸಿ ನಿದ್ರೆಗೆ ಜಾರಿದ ಡ್ರೈವರ್ ನನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರಿನ ದರ್ಬೆ ರಸ್ತೆಯ ಕಲ್ಲಾರೆಯಲ್ಲಿ ನಡೆದಿದೆ.

ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಮುಖ್ಯ ರಸ್ತೆ ಬದಿಯ ಪಾರ್ಕಿಂಗ್ ನಲ್ಲಿ ಆಟೋ ಚಾಲಕನೋರ್ವ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿದ್ದ. ಸುಮಾರು ಒಂದು ಗಂಟೆಯ ವರೆಗೂ ವ್ಯಕ್ತಿ ಮಲಗಿದಾಗೆಯೇ ಇದ್ದ ಹಿನ್ನೆಲೆ ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಗೆ ಏನೋ ಅಪಾಯ ಸಂಭವಿಸಿದೆ ಎಂದು ಯೋಚಿಸಿ, ಸಂಚಾರಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಚಾಲಕ ಕುಡಿದು ಆಟೋ ರಿಕ್ಷಾ ಚಾಲನೆ ಮಾಡಿದ ಹಿನ್ನೆಲೆ ಸಂಚಾರಿ ಠಾಣಾ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದು, ಆಟೋ ರಿಕ್ಷಾವನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!