Thursday, June 4, 2026
Homeಕರಾವಳಿವಿಟ್ಲ: ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದ ಆಟೋ ಚಾಲಕ ನಾಪತ್ತೆ

ವಿಟ್ಲ: ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದ ಆಟೋ ಚಾಲಕ ನಾಪತ್ತೆ

- Advertisement -
- Advertisement -

ವಿಟ್ಲ: ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದ ಆಟೋ ಚಾಲಕ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಲ್ಲಿ ನಡೆದಿದೆ. ವೀರಕಂಬ ಗ್ರಾಮದ ಬಾಯಿಲ ನಿವಾಸಿ ಧನರಾಜ್(28) ನಾಪತ್ತೆಯಾದ ಆಟೋ ಚಾಲಕ.


ನ.28 ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಗಂಟೆಗೆ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಡಿ.3 ರವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.


ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ. ಧನರಾಜ್‌ ಅವರ ರಿಕ್ಷಾ ಮಾತ್ರ ಉಪ್ಪಿನಂಗಡಿಯಲ್ಲಿದ್ದು ಆತನ ಮೊಬೈಲ್ ನಂಬ್ರ ಸ್ವೀಚ್ ಆಫ್ ಆಗಿರುತ್ತದೆ. ಮನೆಗೂ ಬಾರದೆ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾದ ಧನರಾಜ್‌ನನ್ನು ಪತ್ತೆಮಾಡಿ ಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!