Thursday, June 4, 2026
Homeಕರಾವಳಿಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಕಾಲು ಜಾರಿ ಬಿದ್ದು ಆಟೋ ಚಾಲಕ ಸಾವು

ಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಕಾಲು ಜಾರಿ ಬಿದ್ದು ಆಟೋ ಚಾಲಕ ಸಾವು

- Advertisement -
- Advertisement -

ಬಂಟ್ವಾಳ: ಮನೆಯ ಮಹಡಿ ಮೇಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಆಟೋ ಚಾಲಕ ಸಾವನ್ನಪ್ಪಿದ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದಿದೆ.

ಗಡಿಯಾರ ಸಮೀಪದ ಬಾನಗುಂಡಿ ನಿವಾಸಿ ಅಟೋ ರಿಕ್ಷಾ ಚಾಲಕ ಕಾಂತಪ್ಪ ಮೂಲ್ಯ ಮೃತ ದುರ್ದೈವಿ.

ಕಾಂತಪ್ಪ ಮೂಲ್ಯ ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಮನೆಯ ಮಹಡಿ ಮೇಲೆ ಹೋಗಿದ್ದ ಅವರು ಆಕಸ್ಮಿಕ ವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು‌. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸ್ಥಳದಲ್ಲಿಯೇ ಮೃತಪಟ್ಟಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.ಮೃತರ ಗೌರವಾರ್ಥ ಗಡಿಯಾರ ಪಾರ್ಕಿನ ಎಲ್ಲಾ ಅಟೋ ಚಾಲಕರು ಬಾಡಿಗೆ ಹೋಗದೆ ಸಂತಾಪ ಸೂಚಿಸಿದರು.

- Advertisement -

Latest News

error: Content is protected !!