Thursday, June 4, 2026
Homeಕರಾವಳಿಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ, ರಿಕ್ಷಾ ಚಾಲಕನ ಸಹಿತ ಮೂವರಿಗೆ ಗಾಯ

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ, ರಿಕ್ಷಾ ಚಾಲಕನ ಸಹಿತ ಮೂವರಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ, ರಿಕ್ಷಾ ಚಾಲಕನ ಸಹಿತ ಮೂವರಿಗೆ ಗಾಯಗಳಾಗಿರುವ ಘಟನೆ ಉಜಿರೆಯ ಟಿ.ಬಿ ಕ್ರಾಸ್ ಸಮೀಪ ನಡೆದಿದೆ.

ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾದ ಮುಂದೆ ಇದ್ದ ಲಾರಿಯೊಂದು ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ರಿಕ್ಷಾವನ್ನೂ ನಿಲ್ಲಿಸಬೇಕಾಯಿತು.ಆದರೆ ದುರದೃಷ್ಟವಷಾತ್ ಹಿಂದಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಢಿಕ್ಕಿ ಹೊಡಿದಿದೆ.ಪರಿಣಾಮ ಎರಡೂ ಲಾರಿಗಳ ಮಧ್ಯೆ ಸಿಲುಕಿಕೊಂಡ ಆಟೋ ರಿಕ್ಷಾ ಸಂಪೂರ್ಣ ಹಾನಿಗೊಳಗಾಗಿದೆ.

ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

- Advertisement -

Latest News

error: Content is protected !!