Saturday, June 6, 2026
Homeಕರಾವಳಿವಿಟ್ಲ; ಫೋನ್ ನಲ್ಲಿ  ಮಾತನಾಡುತ್ತಿದ್ದಾಗ ಯುವಕನಿಗೆ ಹಲ್ಲೆ, ದೂರು ದಾಖಲು

ವಿಟ್ಲ; ಫೋನ್ ನಲ್ಲಿ  ಮಾತನಾಡುತ್ತಿದ್ದಾಗ ಯುವಕನಿಗೆ ಹಲ್ಲೆ, ದೂರು ದಾಖಲು

- Advertisement -
- Advertisement -

ವಿಟ್ಲ; ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಯುವಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಹಮ್ಮದ್ ಅನ್ವರ್ ಎಂಬ ಯುವಕ  ಕಂಬಳಬೆಟ್ಟು ದರ್ಗಾದ ಬಳಿ ಫೋನ್ ನಲ್ಲಿ ಮಾತನಾಡುವಾಗ ಸಿನಾನ್, ರಾಬಿ, ಸಿಯಾನ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್ ನಲ್ಲಿ ಮಾತನಾಡುವಾಗ ಬೈಕ್ ನಲ್ಲಿ ಬಂದ ಸಿನಾನ್, ಸಿಯಾಬ್, ರಾಬಿ ಎಂಬವರು ಅನ್ವರ್ ಗೆ ಅವಾಚ್ಯವಾಗಿ‌ ನಿಂದಿಸಿದ್ದಲ್ಲದೇ ಬಳಿಕ ಅಲ್ಲೆ ಇದ್ದ ಕಬ್ಬಿಣದ ರಾಡ್ ನಿಂದ ಕತ್ತು ಹಾಗೂ ಮೊಣಕೈಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ಬಳಿಕ ಅನ್ವರ್ ಗೆ ಎದೆನೋವು ಕಾಣಿಸಿಕೊಂಡಿದ್ದು ಪುತ್ತೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!